ಮಂಗಳೂರು: ಸ್ಥಗಿತಗೊಂಡ ಬಸ್‌ಗಳನ್ನು ಪ್ರಾರಂಭಿಸಲು ಶಾಸಕ ವೇದವ್ಯಾಸ್ ಕಾಮತ್ ಮನವಿ

Prakhara News
1 Min Read

ಮಂಗಳೂರು: ಮಂಗಳೂರು ನಗರದ ಕೆಲ ಪ್ರದೇಶಗಳಿಗೆ ಸ್ಥಗಿತಗೊಂಡಿರುವ ಬಸ್ಸುಗಳನ್ನು ಪ್ರಾರಂಭಿಸಲು ಕ್ರಮಕೈಗೊಳ್ಳುವಂತೆ ಶಾಸಕ ವೇವ್ಯಾಸ ಕಾಮತ್ ಮಂಗಳೂರು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಕಳೆದ ಮೇ 6ರಂದು ನಡೆದ ಬಸ್ಸು ಮಾಲಕರ ಸಂಘ, ಕೆಎಸ್‌ಆರ್‌ಟಿಸಿ ಅಧಿಕಾರಿ, ಸಾರಿಗೆ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಸ್ಥಗಿತಗೊಂಡ ಬಸ್ಸುಗಳ ಸಂಚಾರ ಪ್ರಾರಂಭಕ್ಕೆ ಒತ್ತಾಯಿಸಲಾಗಿದ್ದರೂ, ಇದುವರೆಗೆ ಸಂಚಾರ ಪ್ರಾರಂಭಿಸದೇ ಇರುವ ಬಗ್ಗೆ ಸಾರ್ವಜನಿಕರಿಂದ ದೂರು ಬರುತ್ತಿದೆ.

ಕೂಡಲೇ ರೂಟ್ ನಂ.30 ಆಂಟೋನಿ ಮೋಟಾರ್ಸ್ (ಸ್ಟೇಟ್‌ ಬ್ಯಾಂಕ್‌ನಿಂದ ಮರೋಳಿ, ಪಡೀಲ್), ರೂಟ್ ನಂ.30 ಪಿಟಿಸಿ ಬಸ್ಸು (ಸ್ಟೇಟ್‌ ಬ್ಯಾಂಕ್‌ನಿಂದ ಮರೋಳಿ), ರೂಟ್ ನಂ.30ಬಿ ಪಿಟಿಸಿ ಬಸ್ಸು (ಸ್ಟೇಟ್‌ ಬ್ಯಾಂಕ್‌ನಿಂದ ಮರೋಳಿ, ಅಡ್ಯಾರ್), ರೂಟ್ ನಂ.62ಎ ಬಸ್ಸು (ಸುರತ್ಕಲ್, ಕಾಟಿಪಳ್ಳದಿಂದ ಪಡೀಲ್), ರೂಟ್ ನಂ.37 ಮಹೇಶ್ ಮೋಟರ್ಸ್ (ಸ್ಟೇಟ್‌ ಬ್ಯಾಂಕ್ ನಿಂದ ಮರೋಳಿ, ಪಡೀಲ್), ರೂಟ್ ನಂ.9ಎಸ್ (ಬಜಾಲ್‌ನಿಂದ ಸ್ಟೇಟ್‌ ಬ್ಯಾಂಕ್) ಮಾರ್ಗದ ಬಸ್ಸುಗಳನ್ನು ಮರು ಆರಂಭಿಸಲು ಕ್ರಮ ವಹಿಸಬೇಕು ಎಂದು ಶಾಸಕ ವೇವ್ಯಾಸ ಕಾಮತ್ ಅವರು ಮನವಿಯಲ್ಲಿ ತಿಳಿಸಿದ್ದಾರೆ.

Share This Article
Leave a Comment