ಮಂಗಳೂರು: ವಿಕೆ ಕೋಸ್ಟಲ್ ವೆಂಚರ್ಸ್ ಶುಭಾರಂಭ

Prakhara News
1 Min Read

ಮಂಗಳೂರು: ನಗರದ ಪಂಪ್ ವೆಲ್ ನಲ್ಲಿ ವಿಕೆ ಕೋಸ್ಟಲ್ ವೆಂಚರ್ಸ್ ರವಿವಾರ ಬೆಳಗ್ಗೆ ಶುಭಾರಂಭಗೊಂಡಿತು. ಅತಿಥಿಗಳು ದೀಪ ಬೆಳಗಿಸುವ ಮೂಲಕ ನೂತನ ಉದ್ಯಮಕ್ಕೆ ಶುಭ ಹಾರೈಸಿದರು.

ಬಳಿಕ ಮಾತಾಡಿದ ಎಸ್ ಎಲ್ ಶೇಟ್ ಡೈಮಂಡ್ ಹೌಸ್ ಮಾಲಕರಾದ ರವೀಂದ್ರ ಶೆಟ್ ಅವರು, ಚಿತ್ರನಟ ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ , ದೀಕ್ಷಾ ಶೆಟ್ಟಿ ಹಾಗೂ ಸ್ನೇಹಿತರ ಈ ಹೊಸ ಉದ್ಯಮ ಯಶಸ್ವಿಯಾಗಿ ನಡೆಯಲಿ. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿ ಎಂದರು.

ಡಾ.ದೇವರಾಜ್ ರವರು ಮಾತನಾಡಿ, “ವಿನೀತ್ ನನ್ನ ವಿದ್ಯಾರ್ಥಿ ಅವರಿಗೆ ಹಿಂದಿನಿಂದಲೂ ಹೊಸದನ್ನು ಕಲಿಯುವುದರಲ್ಲಿ ಆಸಕ್ತಿ. ಅವರ ಗೆಳೆಯರು ಇಂದಿಗೂ ಜೊತೆಯಾಗಿದ್ದು ಈ ಹೊಸ ಉದ್ಯಮ ಆರಂಭಿಸಿದ್ದಾರೆ ಅವರಿಗೆ ಶುಭಾಶಯಗಳು” ಎಂದರು.
ಉದ್ಯಮಿ ಹರಿಪ್ರಸಾದ್ ರೈ ಬೆಳ್ಳಿಪ್ಪಾಡಿ ಮಾತಾಡಿ, “ಮಂಗಳೂರು ರಾಜ್ಯದಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರ. ಇಂತ ನಗರಕ್ಕೆ ಹೊಸ ಹೊಸ ಉದ್ಯಮಗಳು ಕಾಲಿಡುತ್ತಿರುವುದು ಖುಷಿಯ ವಿಚಾರ. ವಿನೀತ್ ಹಾಗೂ ಸ್ನೇಹಿತರ ಈ ಪಯಣ ಯಶಸ್ಸು ಕಾಣಲಿ” ಎಂದರು.

ಚಿತ್ರ ನಿರ್ಮಾಪಕ ಪ್ರಕಾಶ್ ಪಾಂಡೇಶ್ವರ್ ಮಾತಾಡಿ, “ವಿನೀತ್ ಚಿತ್ರರಂಗದಲ್ಲಿ ಯಶಸ್ಸು ಪಡೆದಂತೆಯೇ ಹೊಸ ಉದ್ಯಮದಲ್ಲೂ ಯಶಸ್ಸು ಕಾಣಲಿ” ಎಂದರು.
ಇನ್ನುಳಿದಂತೆ ಕಾರ್ಯಕ್ರಮದಲ್ಲಿ ರಕ್ಷಿತ್ ರಾವ್, ಸುಧಾಂಜಿ, ಅರವಿಂದ್ ಬೋಳಾರ್, ಜಗನ್ನಾಥ ಶೆಟ್ಟಿ ಬಾಳ , ವಿಖ್ಯಾತ್, ಮಯೂರ್, ಅಶ್ವಿನ್, ಆನಂದ ಕುಂಪಲ, ಆರ್.ಜೆ.ಶಾಹಿಲ್ ಹಾಗೂ ವಿನೀತ್ ಕುಮಾರ್, ಸಮತಾ ಅಮೀನ್, ನಿತಿನ್ ರಾಜ್ ಶೆಟ್ಟಿ, ದೀಕ್ಷಾ ಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಸಾಹಿಲ್ ರೈ ಕಾರ್ಯಕ್ರಮವನ್ನು ನಿರೂಪಿಸಿದರು.

Share This Article
Leave a Comment