ವೈನ್ ಶಾಪ್ ಗೆ ನುಗ್ಗಿ ಕುಡಿದು ಟೈಟ್ ಆಗಿ ಮಲಗಿದ ಕೋತಿ..!

Prakhara News
1 Min Read

ರಾಂಚಿ : ವೈನ್ ಶಾಪ್‌ಗೆ ನುಗ್ಗಿದ ಕೋತಿಯೊಂದು ಮದ್ಯದ ಬಾಟಲಿಗಳಿಟ್ಟಿದ್ದ ಕಪಾಟಿನಲ್ಲಿ ಅತ್ತಿತ್ತ ಓಡಾಡಿ, ಬಳಿಕ ಒಂದು ಬಾಟಲಿಯನ್ನು ಖಾಲಿ ಮಾಡಿ ಬಳಿಕ ಟೈಟ್ ಆಗಿ ಅಲ್ಲೇ ಜಾಗ ಖಾಲಿ ಮಾಡಿಕೊಂಡು ಹಾಯಾಗಿ ನಿದ್ರೆಗೆ ಜಾರಿದ ಘಟನೆ ರಾಂಚಿಯಲ್ಲಿ ನಡೆದಿದೆ. ಇದೀಗ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗುತ್ತಿದೆ.

ಬ್ಲಾಕ್ ಚೌಕ್ ಪ್ರದೇಶದಲ್ಲಿ ನಡೆದಿದೆ ಎನ್ನಲಾದ ಈ ಘಟನೆಯು ಆನ್‌ಲೈನ್‌ನಲ್ಲಿ ನೆಟ್ಟಿಗರ ಗಮನ ಸೆಳೆದಿದ್ದು, ತರಹೇವಾರಿ ಹಾಸ್ಯಮಯ ಕಮೆಂಟ್‌ಗಳ ಮಹಾಪೂರವೇ ಹರಿದುಬರುತ್ತಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಕೋತಿಯು ವೈನ್ ಶಾಪ್‌ನಲ್ಲಿ ತಿರುಗಾಡಿದೆ ಬಳಿಕ ಯಾವುದೋ ಒಂದು ಬಾಟಲಿಯನ್ನು ಖಾಲಿ ಕೂಡ ಮಾಡಿದೆ. ಬಳಿಕ ಸುಮ್ಮನೆ ಕಪಾಟಿನ ಮೇಲೆಯೇ ವಿಶ್ರಾಂತಿ ಪಡೆಯುತ್ತಾ ಮಲಗಿದೆ. ವೈನ್ ಶಾಪ್ ನಲ್ಲಿ ಜನ ಬಂದರೂ ಏನೂ ಗೊತ್ತಾಗದ್ದಂತೆ ಕೋತಿ ನಿದ್ರೆಗೆ ಜಾರಿದೆ. ಅಂಗಡಿಯೊಳಗೆ ನುಗ್ಗಿದ ಕೋತಿ, ಅಲ್ಲಿದ್ದ ಮದ್ಯದ ಬಾಟಲಿಯಿಂದ ಮದ್ಯ ಸೇವಿಸಿದೆ. ಬಳಿಕ ಮತ್ತೇರಿದಂತೆ ಕಂಡುಬಂದ ಕೋತಿ ಅಂಗಡಿಯಲ್ಲೇ ಮಲಗಿ ನಿದ್ರೆಗೆ ಜಾರಿದೆ.

ಕೋತಿ ಅಂಗಡಿಯೊಳಗೆ ಇರುವುದನ್ನು ಗಮನಿಸಿದ ಬಳಿಕ ಸ್ಥಳೀಯರು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ರಕ್ಷಣಾ ತಂಡ ಆಗಮಿಸಿ, ಯಾವುದೇ ಅಪಾಯವಾಗದಂತೆ ಕೋತಿಯನ್ನು ಸುರಕ್ಷಿತವಾಗಿ ರಕ್ಷಿಸಿ ಅಲ್ಲಿಂದ ಕರೆದೊಯ್ದಿದೆ. ಘಟನೆಯ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈನ್‌ ಶಾಪ್‌ಗೆ ನುಗ್ಗಿದ ಕೋತಿ ಮದ್ಯ ಕುಡಿದು ಅಲ್ಲೇ ಮಲಗಿದ ಘಟನೆ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ನೆಟ್ಟಿಗರು ತಮಾಷೆಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ: ಕೆಲವರು ಈ ಕೋತಿಯನ್ನು “ಬಿಲ್ಲು ಪಾವತಿಸದೆ ಉಚಿತವಾಗಿ ಕುಡಿದು ಮಲಗಿದ ಗ್ರಾಹಕ” ಎಂದು ಕರೆದಿದ್ದಾರೆ. ಇನ್ನು ಕೆಲವರು, “ತನ್ನದೇ ಸ್ವಂತ ಬಾರ್ ಎಂಬಂತೆ ಕಪಾಟಿನಲ್ಲಿ ಹಾಯಾಗಿ ಮಲಗಿದೆ” ಎಂದು ತಮಾಷೆ ಮಾಡಿದ್ದಾರೆ.

Share This Article
Leave a Comment