ಹಾಲು ದರ ಏರಿಕೆಯ ಸಂಪೂರ್ಣ ಲಾಭ ರೈತರಿಗೆ, ಬಿಜೆಪಿಯ ಅಪಪ್ರಚಾರಕ್ಕೆ ಕಿವಿಗೊಡಬೇಡಿ: ಪದ್ಮರಾಜ್ ಪೂಜಾರಿ

Prakhara News
1 Min Read

ಮಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಜನಪರ ಯೋಜನೆಗಳು ಹಾಗೂ ಆಡಳಿತವನ್ನು ಸಹಿಸಲಾಗದೆ ಬಿಜೆಪಿ ನಾಯಕರು ಬೆಲೆ ಏರಿಕೆಯ ಹೆಸರಿನಲ್ಲಿ ಸುಳ್ಳು ಅಪಪ್ರಚಾರ ಮಾಡುತ್ತಾ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಪದ್ಮರಾಜ್ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.

ಮಂಗಳೂರಿನಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿನ ದರ ಏರಿಕೆಯಾಗಲಿ ಅಥವಾ ಬಸ್ ಪ್ರಯಾಣ ದರವೇ ಆಗಲಿ, ಇದರ ವಾಸ್ತವಾಂಶಗಳನ್ನು ಮುಚ್ಚಿಟ್ಟು ಬಿಜೆಪಿ ಪ್ರತಿಭಟನೆಯ ನಾಟಕವಾಡುತ್ತಿದೆ ಎಂದರು.

ಹೈನುಗಾರಿಕೆಯಲ್ಲಿ ನಿರತರಾಗಿರುವ ಗ್ರಾಮೀಣ ಭಾಗದ ರೈತರ ಹಿತರಕ್ಷಣೆ ಮತ್ತು ಅವರಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದಲೇ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಹಾಲು ದರ ಏರಿಕೆಯ ಪ್ರತಿ ನಯಾಪೈಸೆ ಹಣವೂ ನೇರವಾಗಿ ಬಡ ಹೈನುಗಾರ ರೈತರ ಜೇಬಿಗೆ ತಲುಪುತ್ತಿದೆ.

ಬಿಜೆಪಿಯವರಿಗೆ ನಿಜಕ್ಕೂ ರೈತರ ಮೇಲೆ ಕಾಳಜಿಯಿದ್ದರೆ, ‘ರೈತರಿಗೆ ಹಣ ಕೊಡಬೇಡಿ, ಹಾಲಿನ ದರ ಹೆಚ್ಚಿಸಬೇಡಿ’ ಎಂದು ಸಾರ್ವಜನಿಕವಾಗಿ ಘೋಷಿಸಲಿ ನೋಡೋಣ. ಸದನದಲ್ಲಿ ಒಪ್ಪಿಗೆ ನೀಡಿ, ಬೀದಿಯಲ್ಲಿ ಜನರಿಗೆ ಸುಳ್ಳು ಹೇಳುವ ಇಬ್ಬಗೆ ನೀತಿಯನ್ನು ಬಿಜೆಪಿ ಬಿಡಬೇಕು ಎಂದು ಹೇಳಿದರು.

ಕೇಂದ್ರದ ಬಿಜೆಪಿ ಸರ್ಕಾರವು ಕಚ್ಚಾ ತೈಲ ಮತ್ತು ಪೆಟ್ರೋಲ್, ಡೀಸೆಲ್ ದರವನ್ನು ಗಗನಕ್ಕೇರಿಸಿರುವುದೇ ಇಂದಿನ ಬಹುತೇಕ ಬೆಲೆ ಏರಿಕೆಗೆ ಮೂಲ ಕಾರಣ ಎಂದು ಪದ್ಮರಾಜ್ ಟೀಕಿಸಿದರು.

Share This Article
Leave a Comment