ಮೊಗವೀರ ಸಮುದಾಯದ ಹಿರಿಯ ನಾಯಕ ಶ್ರೀ ರಾಮಚಂದ್ರ ಬೈಕಂಪಾಡಿ ನಿಧನ

Prakhara News
0 Min Read

ಮಂಗಳೂರು: ಮೊಗವೀರ ಸಮುದಾಯದ ಪ್ರಮುಖ ಧ್ವನಿ, ಭಾರತೀಯ ಜನತಾ ಪಾರ್ಟಿಯ ಹಿರಿಯ ಮುಖಂಡ, KFDCಯ ಮಾಜಿ ಅಧ್ಯಕ್ಷರು, ರಂಗಕರ್ಮಿ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಶ್ರೀಯುತ ರಾಮಚಂದ್ರ ಬೈಕಂಪಾಡಿ ಅವರು ಇಂದು ನಿಧನ ಹೊಂದಿದ್ದಾರೆ.

ಮೀನುಗಾರಿಕಾ ಸಮುದಾಯದ ಕಲ್ಯಾಣ ಮತ್ತು ಅಭಿವೃದ್ಧಿಗೆ ಸತತವಾಗಿ ಶ್ರಮಿಸಿದ ಇವರ ವಿಯೋಗದಿಂದ, ಸಮಾಜವು ಒಬ್ಬ ಸಕ್ರಿಯ ಸೇವಕನನ್ನು ಕಳೆದುಕೊಂಡಂತಾಗಿದೆ. ಭಗವಂತನು ಮೃತರ ಆತ್ಮಕ್ಕೆ ಚಿರಶಾಂತಿಯನ್ನು ನೀಡಲಿ ಹಾಗೂ ಅವರ ಕುಟುಂಬಕ್ಕೆ ಈ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಕರುಣಿಸಲಿ ಎಂದು ಹಲವು ಮುಖಂಡರು ಸಂತಾಪ ಸೂಚಿಸಿದ್ದಾರೆ.

Share This Article
Leave a Comment