ಕಳೆದ 30 ವರ್ಷಗಳಿಂದ ಕುದ್ರೋಳಿ ಪರಿಸರದಲ್ಲಿ ಪತ್ರಿಕಾ ವಿತರಕನಾಗಿ ಕಾರ್ಯನಿರ್ವಹಿಸುತ್ತಿದ್ದ ಶ್ರಮಜೀವಿ ನರೇಶ್‌ ಆತ್ಮಹತ್ಯೆ..!

Prakhara News
0 Min Read

ಮಂಗಳೂರು : ಕಳೆದ 30 ವರ್ಷಗಳಿಂದ ಪತ್ರಿಕಾ ವಿತರಕನಾಗಿ ಕಾರ್ಯನಿರ್ವಹಿಸುತ್ತಿದ್ದ ಮಂಗಳೂರು ಉರ್ವ ನಿವಾಸಿ ನರೇಶ್‌ (54) ಸ್ವಗೃಹದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಕಳೆದ ಹಲವಾರು ವರುಷಗಳಿಂದ ನರೇಶ್‌ ರವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರೆಂದು ತಿಳಿದುಬಂದಿದೆ. ತೀವ್ರ ಮಧುಮೇಹ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕಳೆದ ವಾರ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಆರ್ಥಿಕ ಪರಿಸ್ಥಿತಿಯ ಹೊಡೆತಕ್ಕೆ ಹೆದರಿ ಆತ್ಮಹತ್ಯೆ ಗೆ ಶರಣಾಗಿದ್ದಾರೆಂದು ಮಾಹಿತಿ ದೊರೆತಿದೆ.

ಕುದ್ರೋಳಿ ಭಾರತ್‌ ಪತ್ರಿಕಾಲಯದಲ್ಲಿ ಪತ್ರಿಕಾ ವಿತರಕರಾಗಿ ಸೇವೆ ಸಲ್ಲಿಸುತ್ತಿದ್ದರು. ಮಂಗಳೂರಿನಾದ್ಯಂತ ಎಲ್ಲಾ ಕಚೇರಿಗಳಲ್ಲಿ ಚಿರಪರಿಚತರಾಗಿದ್ದರು. ಮೃತರು ಪತ್ನಿಯನ್ನು ಅಗಲಿದ್ದಾರೆ.

Share This Article
Leave a Comment