ಮಂಗಳೂರು: ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಮುಖ ಜಾಗತಿಕ ಸಲಹಾ ಸಂಸ್ಥೆಯಾಗಿರುವ ಹೆಸರಾಂತ ಸಿಗ್ನಸ್ ಸೊಲ್ಯೂಷನ್ಸ್ ಕಂಪೆನಿಯಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನದ ಆಚರಣೆ ಕಾರ್ಯಕ್ರಮ ನಡೆಯಿತು.



ಈ ಸಂಧರ್ಭದಲ್ಲಿ ಭಾರತೀಯ ಮಹಿಳಾ ವಿಶ್ವಕಪ್ ತಂಡದ ಆಟಗಾರ್ತಿ ಧನಲಕ್ಷ್ಮಿ ಪೂಜಾರಿಯವರಿಗೆ ಗೌರವದ ಸನ್ಮಾನವನ್ನು ಕಂಪೆನಿಯ ಸಿಬ್ಬಂಧಿಗಳು ಹಾಗೂ ಅತಿಥಿಗಳು ನಡೆಸಿಕೊಟ್ಟರು.

ಕಾರ್ಯಕ್ರಮದ ಮುಖ್ಯ ಭಾಷಣಕಾರರಾಗಿ ಇಂಡಿಗೊ ಏರ್ ಲೈನ್ಸ್ ನ ಮಾಜಿ ಸ್ಟೇಷನ್ ಮ್ಯಾನೇಜರ್ ಶ್ರೀಮತಿ ಅರ್ಚನಾ ಸಚಿತ್ ರವರು ಮಾತನಾಡಿ ವಾಯುಯಾನ ಉದ್ಯಮದಲ್ಲಿ ಇಪ್ಪತ್ತ ಐದು ವರ್ಷಕ್ಕೂ ಹೆಚ್ಚಿನ ತಮ್ಮ ಅಧ್ಬುತ ಅನುಭವಗಳನ್ನು ಹಂಚಿಕೊಂಡರು. ನಾಯಕತ್ವ, ಸ್ಥಿತಿ ಸ್ಥಾಪಕತ್ವ ಮತ್ತು ಒಬ್ಬರ ಕನಸುಗಳನ್ನು ಅನುಸರಿಸುವ ಬಗ್ಗೆ ತಮ್ಮ ಒಳನೋಟಗಳೊಂದಿಗೆ ಎಲ್ಲರನ್ನೂ ಪ್ರೇರೇಪಿಸಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಡೆಪ್ಯುಟಿ ಜನರಲ್ ಮ್ಯಾನೇಜರ್ ಕಾಪು ಹನೀಫ್ ಮೊಹಮ್ಮದ್ ಹಾಗೂ ಸಂಸ್ಥೆಯ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿದ್ದರು.





