ಕಾಂಚನ ಹೋಂಡಾ: 1,618 ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ – ಮೆಗಾ ಫೆಸ್ಟಿವ್ ಧಮಾಕ ವಿಶೇಷ ಕೊಡುಗೆ ಮುಂದುವರಿಕೆ

Prakhara News
1 Min Read

ಮಂಗಳೂರು: ಕರಾವಳಿ ಭಾಗದಲ್ಲಿ ಹಲವು ವರ್ಷಗಳಿಂದ ಗ್ರಾಹಕರ ವಿಶ್ವಾಸ ಗಳಿಸಿರುವ ಕಾಂಚನ ಮೋಟಾರ್ಸ್‌ ಅಂಗಸಂಸ್ಥೆ ಕಾಂಚನ ಹೋಂಡಾ, ಈ ಬಾರಿಯ ಹಬ್ಬದ ಋತುವಿನಲ್ಲಿ ದ್ವಿಚಕ್ರ ವಾಹನ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ. ಮಂಗಳೂರು ನಗರವೊಂದರಲ್ಲೇ ಅ.30ರ ವರೆಗೆ 1,618ಕ್ಕೂ ಅಧಿಕ ಹೋಂಡಾ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಸಂಸ್ಥೆಯು ಗ್ರಾಹಕರಿಗಾಗಿ ಘೋಷಿಸಿರುವ ‘ಮೆಗಾ ಫೆಸ್ಟಿವ್ ಧಮಾಕ’ ವಿಶೇಷ ಕೊಡುಗೆಯನ್ನು ಮುಂದುವರಿಸಿದೆ. ಈ ಕೊಡುಗೆಯಡಿ ಗ್ರಾಹಕರು ಕೇವಲ 1 ರೂ. ಡೌನ್ ಪೇಮೆಂಟ್ ಪಾವತಿಸಿ ಯಾವುದೇ ಹೋಂಡಾ ದ್ವೀಚಕ್ರ ವಾಹನವನ್ನು ಖರೀದಿಸಬಹುದಾಗಿದೆ. ಹೋಂಡಾ ಆ್ಯಕ್ಟಿವಾ ಅಲ್ಲದೆ, ಗೆಲ್ಲುವ ಸುವರ್ಣಾವಕಾಶವನ್ನೂ ಸಂಸ್ಥೆ ಕಲ್ಪಿಸಿದೆ.

‘ಒಂದು ಖರೀದಿಸಿ, ಇನ್ನೊಂದು ಗೆಲ್ಲಿ’ ಆಫರ್‌ನಡಿ ವಾಹನ ಖರೀದಿಸುವ ಗ್ರಾಹಕರಿಗೆ ಕೇವಲ 1 ರೂ. ಪಾವತಿಸಿ ವಾಹನ ಪಡೆಯುವ ಅವಕಾಶವಿದೆ. ಇದರೊಂದಿಗೆ ಶೇ.0 ಬಡ್ಡಿದರದಲ್ಲಿ ಬ್ಯಾಂಕ್ ಸಾಲ ಸೌಲಭ್ಯವೂ ಲಭ್ಯವಿದೆ. ಮೆಗಾ ಫೆಸ್ಟಿವ್ ಧಮಾಕದ ಭಾಗವಾಗಿ ಪ್ರತಿ ತಿಂಗಳು ಐಫೋನ್, ಪ್ರತಿ ವಾರ ಚಿನ್ನದ ನಾಣ್ಯ ಹಾಗೂ 5,000 ರೂ. ವರೆಗೆ ಖಚಿತ ಉಡುಗೊರೆಗಳನ್ನುಗೆಲ್ಲುವ ಅವಕಾಶವನ್ನೂ ಗ್ರಾಹಕರಿಗೆ ನೀಡಲಾಗಿದೆ.

ಈಗಾಗಲೇ ಎರಡನೇ ಹಂತದ ಲಕ್ಕಿ ಡ್ರಾ ಫಲಿತಾಂಶ ಪ್ರಕಟವಾಗಿದ್ದು, ಮಂಗಳೂರಿನ ಪ್ರತಾಪ್‌ ಅವರು ಚಿನ್ನದ ನಾಣ್ಯ ಹಾಗೂ ದೇವದಾಸ್ ಅವರು ಐಫೋನ್ ಗೆದ್ದಿದ್ದಾರೆ. ವಿಜೇತ ಗ್ರಾಹಕರನ್ನು ಕಾಂಚನ ಗ್ರೂಪ್ ಅಭಿನಂದಿಸಿದೆ. ಇತ್ತೀಚಿನ ದಿನಗಳಲ್ಲಿ ಪುತ್ತೂರು ಭಾಗದಲ್ಲಿಯೂ ಹೋಂಡಾ ದ್ವಿಚಕ್ರ ವಾಹನಗಳಿಗೆ ಹೆಚ್ಚಿನ ಬೇಡಿಕೆ ವ್ಯಕ್ತವಾಗುತ್ತಿದೆ. ಗ್ರಾಹಕರಿಗೆ ತ್ವರಿತ ಹಾಗೂ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಕಾಂಚನ ಹೋಂಡಾ ವತಿಯಿಂದ ಪುತ್ತೂರು, ಸುಳ್ಯ, ಉಪ್ಪಿನಂಗಡಿ ಹಾಗೂ ಕಡಬದಲ್ಲಿ ನೂತನ ಶೋರೂಂಗಳನ್ನು ಆರಂಭಿಸಲಾಗಿದೆ. ವಿಶೇಷ ಕೊಡುಗೆಗಳು ಹಾಗೂ ಹೋಂಡಾ ದ್ವಿಚಕ್ರ ವಾಹನಗಳ ಖರೀದಿ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ಸಮೀಪದ ಕಾಂಚನ ಹೋಂಡಾ ಶೋರೂಂಗೆ ಭೇಟಿ ನೀಡಿ ವಿವರ ಪಡೆಯಬಹುದು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Share This Article
Leave a Comment