ಕಾಂಚನ ಹೋಂಡಾ: 1,500 ದ್ವಿಚಕ್ರ ವಾಹನಗಳ ದಾಖಲೆಯ ಮಾರಾಟ – ಮೆಗಾ ಫೆಸ್ಟಿವ್ ಧಮಾಕ ವಿಶೇಷ ಕೊಡುಗೆ ಮುಂದುವರಿಕೆ

Prakhara News
1 Min Read

ಮಂಗಳೂರು: ಕರಾವಳಿಯಾದ್ಯಂತ ಹಲವು ವರ್ಷಗಳಿಂದ ಗ್ರಾಹಕರಿಗೆ ತೃಪ್ತಿದಾಯಕ ಸೇವೆ ನೀಡುತ್ತಿರುವ ಕಾಂಚನ ಮೋಟಾರ್ಸ್‌ ಅಂಗ ಸಂಸ್ಥೆ ಕಾಂಚನ ಹೋಂಡಾವು ಹಬ್ಬದ ಮೆಗಾ ಫೆಸ್ಟಿವ್ ಧಮಾಕದಲ್ಲಿ ಜಿಲ್ಲೆಯಲ್ಲೇ ಅತಿ ಹೆಚ್ಚು ದ್ವಿಚಕ್ರ ವಾಹನ ಮಾರಾಟ ಮಾಡುವ ಮೂಲಕ ದಾಖಲೆಯನ್ನು ಮುರಿದಿದೆ. ಮಂಗಳೂರು ನಗರದಲ್ಲೇ ಅ.30ರ ತನಕ 1,500ಕ್ಕೂ ಅಧಿಕ ಹೋಂಡಾ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ.

ಮುಂಬರುವ ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಕಾಂಚನ ಸಂಸ್ಥೆಯು ಮೆಗಾ ಫೆಸ್ಟಿವ್ ಧಮಾಕ ವಿಶೇಷ ಕೊಡುಗೆಯನ್ನು ಮುಂದುವರಿಸಿದೆ. ಈ ಕೊಡುಗೆಯಲ್ಲಿ ಗ್ರಾಹಕರು 1 ರೂ. ಡೌನ್ ಪೇಮೆಂಟಲ್ಲಿ ಯಾವುದೇ ಹೋಂಡಾ ದ್ವಿಚಕ್ರ ವಾಹನ ಖರೀದಿಸಿ, ಅದರೊಂದಿಗೆ ಹೋಂಡಾ ಆ್ಯಕ್ಟಿವಾ ಗೆಲ್ಲುವ ಅವಕಾಶ ಕಲ್ಪಿಸಿದೆ.

ಒಂದು ಖರೀದಿಸಿ, ಇನ್ನೊಂದು ಗೆಲ್ಲಿ ಆಫರ್‌ನಡಿ ಹೋಂಡಾ ದ್ವಿಚಕ್ರ ವಾಹನ ಖರೀದಿಸುವ ಗ್ರಾಹಕರು ಕೇವಲ ಒಂದು ರೂಪಾಯಿ ಪಾವತಿಸಿ ವಾಹನ ಪಡೆಯುವ ಅವಕಾಶವಿದೆ. ಜೊತೆಗೆ ಶೇ.0 ಬಡ್ಡಿದರದಲ್ಲಿ ಬ್ಯಾಂಕ್ ಸಾಲದ ಸೌಲಭ್ಯವನ್ನೂ ನೀಡಲಾಗುತ್ತದೆ. ಮೆಗಾ ಫೆಸ್ಟಿವ್ ಧಮಾಕದ ಅಂಗವಾಗಿ ಪ್ರತಿ ತಿಂಗಳು ಐಫೋನ್, ಪ್ರತಿ ವಾರ ಚಿನ್ನದ ನಾಣ್ಯ ಹಾಗೂ 5,000 ರೂ. ವರೆಗೆ ಖಚಿತ ಉಡುಗೊರೆಗಳನ್ನು ಗೆಲ್ಲುವ ಅವಕಾಶವಿದೆ.

ಇದೀಗ ಎರಡನೇ ಹಂತದ ಲಕ್ಕಿ ಡ್ರಾನಲ್ಲಿ ಮಂಗಳೂರಿನ ಪ್ರತಾಪ್ ಚಿನ್ನದ ನಾಣ್ಯವನ್ನು ಗೆದ್ದಿರುತ್ತಾರೆ, ಅದಲ್ಲದೆ ಮಂಗಳೂರಿನ ದೇವದಾಸ್ ಅವರು ಐಫೋನನ್ನು ಗೆದ್ದಿರುತ್ತಾರೆ. ಈ ಸಂದರ್ಭದಲ್ಲಿ ಕಾಂಚನಾ ಗ್ರೂಪ್ ತಮ್ಮ ಎಲ್ಲಾ ಅದೃಷ್ಟಶಾಲಿ ಗ್ರಾಹಕರನ್ನು ಅಭಿನಂದಿಸುತ್ತದೆ.

ಹೋಂಡಾ ದ್ವಿಚಕ್ರ ವಾಹನಗಳ ಬಗ್ಗೆ ಪುತ್ತೂರು ಭಾಗದ ಗ್ರಾಕಹರಿಂದ ಭಾರೀ ಬೇಡಿಕೆಯು ಮೂಡಿ ಬಂದಿದ್ದು, ಜನತೆಯ ತ್ವರಿತ ಸೇವೆಗಾಗಿ ಪುತ್ತೂರು, ಸುಳ್ಯ, ಉಪ್ಪಿನಂಗಡಿ ಹಾಗೂ ಕಡಬದಲ್ಲಿ ಕಾಂಚನ ಹೋಂಡಾದ ಹೊಸ ಶೋರೂಮ್‌ಗಳು ಆರಂಭಗೊಂಡಿವೆ.

ಈ ವಿಶೇಷ ಕೊಡುಗೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ಗ್ರಾಹಕರು ತಮ್ಮ ಹತ್ತಿರದ ಶೋರೂಮ್ ಗಳಿಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ 9945564997 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Share This Article
Leave a Comment