ಮಂಗಳೂರು: ಫ್ಯಾಷನ್ ಡಿಸೈನರ್ ಯಜ್ಞೇಶ್ ಉಳ್ಳಾಲ ಆತ್ಮಹತ್ಯೆಗೆ ಶರಣು

Prakhara News
0 Min Read

ಮಂಗಳೂರು: ಫ್ಯಾಷನ್ ಡಿಸೈನರ್ ಹಾಗೂ ಮೇಕ್ ಅಪ್ ಉದ್ಯಮದಲ್ಲಿ ತನ್ನನು ತೊಡಗಿಸಿಕೊಂಡಿದ್ದ ಅವಿವಾಹಿತ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದುಃಖದ ಘಟನೆ ಉಳ್ಳಾಲದ ಸುಂದರಿಬಾಗ್‌ನಲ್ಲಿ ನಡೆದಿದೆ.

ಶಿಲ್ಪಾ ವುಡ್ ಇಂಡಸ್ಟ್ರೀಸ್ ಮಾಲಕರಾದ ಸುರೇಶ್ ಅವರ ಪುತ್ರ ಯಜ್ಞೇಶ್ ಉಳ್ಳಾಲ (32) ಆತ್ಮಹತ್ಯೆ ಮಾಡಿಕೊಂಡವರು. ಅವಿವಾಹಿತರಾಗಿದ್ದ ಯಜ್ಞೇಶ್ ಅವರು ನಿನ್ನೆ ಮನೆಯಲ್ಲಿ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಫ್ಯಾಷನ್ ಹಾಗೂ ಸಿನಿಮಾ ಮೇಕಪ್ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದ ಅವರು ತುಳು ಚಲನಚಿತ್ರರಂಗದ ಕೆಲ ನಟರ ಆಪ್ತರಾಗಿದ್ದರು ಎನ್ನಲಾಗಿದೆ. ಘಟನೆಯ ಕುರಿತು ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಿದೆ.

Share This Article
Leave a Comment