ನವದೆಹಲಿ: ಬೆಂಗಳೂರು, ದೆಹಲಿ, ಕೋಲ್ಕತ್ತಾ ಸೇರಿದಂತೆ ಹಲವು ಮಹಾನಗರಗಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ 200 ರೂ.ಗಳಷ್ಟು ಇಳಿಕೆಯಾಗಿದೆ.


ಇಂದು ಕೋಲ್ಕತ್ತಾದಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 209, ದೆಹಲಿಯಲ್ಲಿ 202 ರೂ.ಗಳಷ್ಟು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 200 ರೂ. ಇಳಿಕೆಯಾಗಿದ್ದು, ಪರಿಷ್ಕೃತ ದರ ಇಂದಿನಿಂದಲೇ ಜಾರಿಯಾಗಲಿದೆ.

ಕೋಲ್ಕತ್ತಾದಲ್ಲಿ ಪ್ರತಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 209 ರೂ. ಇಳಿಕೆಯಾಗಿದ್ದು ಪ್ರತಿ ಸಿಲಿಂಡರ್ ಬೆಲೆ 2,872.50 ರೂ.ಗೆ ಇಳಿಕೆಯಾಗಿದೆ. ದೆಹಲಿಯಲ್ಲಿ ಪ್ರತಿ ಸಿಲಿಂಡರ್ ಮೇಲಿನ ಬೆಲೆ 202 ರೂ. ಇಳಿಕೆಯಾಗಿದ್ದು, 2,728 ರೂ.ಗೆ ಇಳಿದಿದೆ. ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಬೆಲೆ (ರೀಟೇಲ್ ದರ) 2,930ರೂ. ರಷ್ಟಿದ್ದು, ಹೊಸ ದರಗಳು ಜುಲೈ 1 ರಿಂದ ಜಾರಿಗೆ ಬಂದಿವೆ.



