ತೆಲಿಕೆದ ತೆನಾಲಿ ತಂಡ ಕಾರ್ಕಳ ಹಾಗೂ ಬಂಡಿ ಮಠ ಫೌಂಡೇಶನ್ ಇವರ ಸಹಯೋಗದಲ್ಲಿ ಕಾರ್ಕಳದಲ್ಲಿ “ತೆಲಿಕೆದ ಸಂಭ್ರಮ”

Prakhara News
1 Min Read

ಕಾರ್ಕಳ: ಬಲೆ ತೆಲಿಪಾಲೆ.ಮಜಾ ಭಾರತ. V4 ಕಾಮಿಡಿ ಪ್ರೀಮಿಯರ್ ಲೀಗ್ ಚಾಂಪಿಯನ್ ಪ್ರಶಸ್ತಿ ವಿಜೇತ ಚಲನಚಿತ್ರ ನಟ ತೆಲಿಕೆದ ತೆನಾಲಿ ಸುನಿಲ್ ನೆಲ್ಲಿಗುಡ್ಡೆ ಸಾರಥ್ಯದ
ತೆಲಿಕೆದ ತೆನಾಲಿ ತಂಡ ಕಾರ್ಕಳ ಹಾಗೂ ಬಂಡಿ ಮಠ ಫೌಂಡೇಶನ್ ಇವರ ಸಹಯೋಗದಲ್ಲಿ ಮೇ 31 ರ ರವಿವಾರ ಕಾರ್ಕಳ ಪೆರ್ವಾಜೆ ಬಿಲ್ಲವ ಸಂಘದಲ್ಲಿ ದಿವಂಗತ|ಡಿ.ಆರ್.ರಾಜು ವೇದಿಕೆಯಲ್ಲಿ ತೆಲಿಕೆದ ಸಂಭ್ರಮ 2026 ಕಾರ್ಯಕ್ರಮ ನಡೆಯಲಿದೆ.

ಕಾರ್ಕಳ ರಂಗಭೂಮಿ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ. ತುಳು ಸ್ಟಾಂಡ್ ಅಪ್ ಕಾಮಿಡಿ ತುಳುನಾಡ ಕಾಮಿಡಿ ಸ್ಟಾರ್ ಹಾಸ್ಯ ಸ್ಪರ್ಧೆ ನಡೆಯಲಿದೆ.ತುಳುನಾಡಿನ ಹೆಸರಾಂತ ಸ್ಟಾಂಡ್ ಅಪ್ ಕಲಾವಿದರನ್ನು ಆಹ್ವಾನಿಸಿ. ಅವರ ನಡುವೆ ಹಾಸ್ಯದ ಫೈನಲ್ ಹಣಾಹಣಿ ನಡೆಯಲಿದೆ

ಅದರ ಜೊತೆಗೆ ವಿಶೇಷ ಆಕರ್ಷಣೆಯಾಗಿ ಮಂಗಳೂರಿನ
ಬಾಲ ಪ್ರತಿಭೆ ಯಜತ್ ಯಶ್ವಿನ್ ಅವರಿಂದ ಮೈಂಡ್ ಮಿರಾಕಲ್ (ಗಾಂಧಾರಿ ವಿದ್ಯೆ )ಕಾರ್ಯಕ್ರಮ ನಡೆಯಲಿದೆ
ಈ ಕಾರ್ಯಕ್ರಮ ಮಧ್ಯಾಹ್ನ 2 ಗಂಟೆಗೆ ಪ್ರಾರಂಭವಾಗಿ
ರಾತ್ರಿ 7 ಗಂಟೆಗೆ ಸಮಾಪನಗೊಳ್ಳಲಿದೆ ಎಂದು ಕಾರ್ಯಕ್ರಮ ವ್ಯವಸ್ಥಾಪಕರು ತಿಳಿಸಿರುತ್ತಾರೆ.

Share This Article
Leave a Comment