ಮಂಗಳೂರು: ನ.28 ರಂದು ಎಸ್. ಡಿ. ಎಂ ಕಾನೂನು ಕಾಲೇಜಿನಲ್ಲಿ ಶ್ರೀ ಎಂ.ಕೆ. ವಿಜಯ ಕುಮಾರ್ ಸ್ಮಾರಕ ಉಪನ್ಯಾಸ

Prakhara News
1 Min Read

ಮಂಗಳೂರು: ನ್ಯಾಯ ಕ್ಷೇತ್ರದ ದಂತಕಥೆ, ಹಿರಿಯ ನ್ಯಾಯವಾದಿ ದಿ. ಶ್ರೀ ಎಂ.ಕೆ. ವಿಜಯ ಕುಮಾರ್ ಅವರ ಸ್ಮರಣಾರ್ಥ ಮಂಗಳೂರಿನ ಎಸ್.ಡಿ.ಎಂ ಕಾನೂನು ಮಹಾವಿದ್ಯಾಲಯದಲ್ಲಿ ‘ಸ್ಮಾರಕ ಉಪನ್ಯಾಸ’ ಮತ್ತು ವಿದ್ಯಾರ್ಥಿ ಸಹಾಯ ನಿಧಿ ವಿತರಣಾ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವು ಶ್ರೀ ಕ್ಷೇತ್ರ ಧರ್ಮಸ್ಥಳದ ಪೂಜ್ಯ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಮಂಗಳೂರಿನ ಎಸ್.ಡಿ.ಎಂ ಕಾನೂನು ಕಾಲೇಜಿನ ಸಭಾಭವನದಲ್ಲಿ ನವೆಂಬರ್ 28, ಶನಿವಾರ ಅಪರಾಹ್ನ 3.30 ಗಂಟೆಗೆ ಜರುಗಲಿರುವುದು.

ಘನ ಉಪಸ್ಥಿತಿ: ಆಂಧ್ರಪ್ರದೇಶದ ಗೌರವಾನ್ವಿತ ರಾಜ್ಯಪಾಲರು ಹಾಗೂ ಭಾರತದ ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಎಸ್. ಅಬ್ದುಲ್ ನಜೀರ್ ಅವರು ಕಾರ್ಯಕ್ರಮಕ್ಕೆ ಘನ ಉಪಸ್ಥಿತಿ ನೀಡಲಿದ್ದಾರೆ.

ಸ್ಮಾರಕ ಉಪನ್ಯಾಸ: ಕರ್ನಾಟಕದ ಮಾಜಿ ಅಡ್ವೊಕೇಟ್ ಜನರಲ್ ಹಾಗೂ ಹಿರಿಯ ವಕೀಲರಾದ ಶ್ರೀ ಉದಯ ಹೊಳ್ಳ ಅವರು ಸ್ಮಾರಕ ಉಪನ್ಯಾಸ ನೀಡಲಿದ್ದಾರೆ.

ಗೌರವ ಅತಿಥಿಗಳು: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀ ಡಿ. ಸುರೇಂದ್ರ ಕುಮಾರ್ ಹಾಗೂ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಶ್ರೀ ಜಗದೀಶ್ ಶೆಣವ ಅವರು ಗೌರವ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ, ವಕೀಲರಿಗೆ, ಕಾನೂನು ವಿದ್ಯಾರ್ಥಿಗಳಿಗೆ ಹಾಗೂ ಆಸಕ್ತರಿಗೆ ಆತ್ಮೀಯ ಸ್ವಾಗತವಿದೆ ಎಂದು ಗುರುವಂದನಾ ಸಮಿತಿಯ ಅಧ್ಯಕ್ಷರಾದ ವಕೀಲ ಶ್ರೀ ಬಿ. ಭರತ್‌ರಾಜ್, ಕಾರ್ಯಕ್ರಮದ ಸಂಯೋಜಕರಾದ ಡಾ. ಡಿಂಪಲ್ ಮೇಸ್ತ ಹಾಗೂ ಕಾಲೇಜಿನ ಪ್ರಾಂಶುಪಾಲರಾದ ಡಾ. ತಾರಾನಾಥ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
Leave a Comment