ಮನೆ ನಿರ್ಮಾಣಕ್ಕೆ ಆರ್ಥಿಕ ನೆರವು ನೀಡಿದ ದಂತ ಫೌಂಡೇಶನ್

Prakhara News
0 Min Read

ಸುರತ್ಕಲ್: ಸಾಮಾಜಿಕ ಸೇವೆಯ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸುತ್ತಿರುವ ದಂತ ಫೌಂಡೇಶನ್(ರಿ.) ಮಂಗಳೂರು ವತಿಯಿಂದ ಸುಜಾತಾ ಅವರ ಮನೆ ನಿರ್ಮಾಣಕ್ಕೆ 50 ಸಾವಿರ ರೂ. ಧನಸಹಾಯ ನೀಡಲಾಯಿತು.

50 ಸಾವಿರ ರೂ. ಮೊತ್ತದ ಚೆಕ್ಕನ್ನು ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಸುಜಾತಾ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ದಂತ ಫೌಂಡೇಶನ್‌ನ ಟ್ರಸ್ಟಿಗಳಾದ ಶ್ವೇತಾ ಪೂಜಾರಿ, ರಾಕೇಶ್ ಬಂಗೇರ, ಸುನಿಲ್ ಸಾಲ್ಯನ್, ಪುಷ್ಪರಾಜ್ ವಿ., ಕರ್ಕೇರಾ ಮುಕ್ಕ ಹಾಗೂ ಯೋಗೀಶ್ ಸನಿಲ್ ಉಪಸ್ಥಿತರಿದ್ದರು.

Share This Article
Leave a Comment