ಮಂಗಳೂರು: ನಾಟೆಕಲ್ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾಜಿ ಡಾನ್ ಬಳ್ಳಾಲ್ ಬಾಗ್ ಪ್ರಮೋದ್ ಭಾಗಿ

Prakhara News
1 Min Read

ಮಂಗಳೂರು: ಕರ್ನಾಟಕ ರಕ್ಷಣಾ ವೇದಿಕೆ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ,ಯೂತ್ ಪೋರಂ ವತಿಯಿಂದ ನಾಟೆಕಲ್ ನಲ್ಲಿ ನಡೆದ ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಆಗಮಿಸಿದ ಹಲವು ಮುಖ್ಯ ಅತಿಥಿಗಳಲ್ಲಿ ಒಬ್ಬರಾದ ಒಂದು ಸಮಯದಲ್ಲಿ ಮಂಗಳೂರು ಭೂಗತ ಲೋಕದಲ್ಲಿ ಹೆಸರು ಮಾಡಿದ ಮಾಜಿ ಡಾನ್ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಧ್ಯಕ್ಷರಾದ ಟಿಎ ನಾರಾಯಣ ಗೌಡರ ನಾಯಕತ್ವ ,ನೆಲದ ಮಕ್ಕಳ ಉದ್ಯೋಗಕ್ಕಾಗಿ ಕರವೇ ನಡೆಸುವ ಹೋರಾಟ,ಜಾತ್ಯತೀತ ತತ್ವ ಸಿದ್ಧಾಂತವನ್ನು ಬೆಂಬಲಿಸಿದ ಇವರು ಒಂದು ಸಂದರ್ಭದಲ್ಲಿ ಕರವೇ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿ ನಂತರದ ದಿನಗಳಲ್ಲಿ ಸಾಮಾಜಿಕ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡ ಸಮಾಜ ಸೇವಕ, ಬಿರುವೆರ್ ಕುಡ್ಲ ಇದರ ಸ್ಥಾಪನೆಯಲ್ಲಿ ಮೂಂಚೂಣಿಯಲ್ಲಿ ಗುರುತಿಸಿದ ಬಳ್ಳಾಲ್ ಬಾಗ್ ಪ್ರಮೋದ್ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಜಿಲ್ಲೆಯಲ್ಲಿ ಕನ್ನಡದ ಮೂಲಕ ಜಾತ್ಯತೀತ ತತ್ವವನ್ನು ಎತ್ತಿ ಹಿಡಿದ ಸಂಘಟನಾ ಚತುರ ಯುವ ನಾಯಕ ಮೌಸೀರ್ ಸಾಮಣಿಗೆ ಮತ್ತು ಅವರ ಯುವಕರಿಗೆ ವ್ಯಕ್ತಿಕವಾಗಿ ಮತ್ತು ನನ್ನ ಎಲ್ಲಾ ತಂಡದ ಬೆಂಬಲ ನೀಡಲು ಬಯಸುತ್ತೇನೆ ಎಂದು ಭರವಸೆ ನೀಡಿದರು.

Share This Article
Leave a Comment