ಪುತ್ತೂರು: ‘ಅರುಣ ಸಾರಥಿ ಸಂಘಟನೆ’ಯ ಮಾಸಿಕ ಸಭೆಯು ಟ್ರಸ್ಟ್ ನ ಸಂಚಾಲಕರಾದ ‘ಅರುಣ್ ಪುತ್ತಿಲ’ ಅವರ ಉಪಸ್ಥಿತಿಯಲ್ಲಿ ‘ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಕಛೇರಿ’ಯಲ್ಲಿ ನಡೆಯಿತು.


ಸಂಘಟನೆಯ ಮುಂದಿನ ಕಾರ್ಯ ವೈಖರಿಗಳ ಬಗ್ಗೆ ಚರ್ಚಿಸಲಾಯಿತು.ಅರುಣ ಸಾರಥಿ ಆಟೋ ಚಾಲಕ ಮಾಲಕರ ಸಂಘದ ವತಿಯಿಂದ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಪುತ್ತೂರು ತಾಲೂಕು ತೆಂಕಿಲ ನಿವಾಸಿ ಚಿರಾಗ್ ಇವರಿಗೆ 10,000 ರೂ.ಧನಸಹಾಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಟ್ರಸ್ಟ್ ನ ಸಹ ಸಂಘಟನಾ ಕಾರ್ಯದರ್ಶಿ ಅನಿಲ್ ತೆಂಕಿಲ,ಮನೀಶ್ ಕುಲಾಲ್ ಮತ್ತು ಅರುಣ ಸಾರಥಿ ಸಂಘಟನೆಯ ಅಧ್ಯಕ್ಷರಾದ ಸಂದೇಶ್ ನಾೖಕ್ ಕೆಯ್ಯೂರು,ಪ್ರಧಾನ ಕಾರ್ಯದರ್ಶಿ ಸಚಿನ್ ವಳತ್ತಡ್ಕ,ಕೋಶಾಧಿಕಾರಿ ಶಿವಪ್ರಸಾದ್ ಮುಕ್ರಂಪಾಡಿ,ಸದಸ್ಯರುಗಳಾದ ತೀರ್ಥರಾಮ ಜಿಡೆಕಲ್ಲು,ಸ್ವಸ್ತಿಕ್ ಗೌಡ ತಾರಿಗುಡ್ಡೆ,ಚಂದ್ರ ಶೇಖರ ರಾಗಿದಕುಮೇರು,ಯತೀಶ್ ಮಚ್ಚಿಮಲೆ,ಗುರುಪ್ರಸಾದ್ ದೊಡ್ಡಡ್ಕ,ಸುರೇಶ್ ಬಂಗಾರಡ್ಕ,ಕೇಶವ ನಾಯ್ಕ್ ರೈಲ್ವೇ,ಸತೀಶ್ ಡಿ ಕುಂಬ್ರ,ಅಶೋಕ ಬಿ,ಬಾಲಕೃಷ್ಣ ಬಲ್ನಾಡು,ದಿನೇಶ್ ಮಣಿಯಾಣಿ,ರವಿಚಂದ್ರ,ಪ್ರವೀಣ್ ಕೆಮ್ಮಾಯಿ ಮೊದಲಾದವರು ಉಪಸ್ಥಿತರಿದ್ದರು.




