ಉಳ್ಳಾಲ: ಲೈಂಗಿಕ ಹಲ್ಲೆ, ಪೋಕ್ಸೋ ಕಾಯಿದೆಯಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಗೆ ಜಾಮೀನು ಮಂಜೂರು..!

Prakhara News
2 Min Read

ಉಳ್ಳಾಲ: ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಚಂದ್ರಹಾಸ ಎಂಬ ವ್ಯಕ್ತಿಯ ವಿರುದ್ಧ ಲೈಂಗಿಕ ಹಲ್ಲೆ, ಪೋಕ್ಸೋ ಕಾಯಿದೆ ಅಡಿಯಲ್ಲಿ ದಾಖಲಾಗಿದ್ದ ಕೇಸ್ ನಲ್ಲಿ ಮಂಗಳೂರಿನ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ (FTSC ) ನ್ಯಾಯಾಲಯವು ಪ್ರಕರಣದ ಸತ್ಯಾಸತ್ಯತೆಯ ಮೇಲೆ ಸಂಶಯ ವ್ಯಕ್ತಪಡಿಸಿ ಆರೋಪಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿ ಪರ ವಕೀಲ ಶಿವಾನಂದ ವಕ್ಕೆತ್ತಿರಿ ವಿಟ್ಲ , ಮಿತೇಶ್ ಪೂಜಾರಿ ವಾದ ಮಂಡನೆ.

ಪ್ರಕರಣದ ವಿವರ :
ದೂರುದಾರ ಮಹಿಳೆ ತನ್ನ ಕುಟುಂಬದೊಂದಿಗೆ ಆರೋಪಿಯ ಮನೆಯ ಒಂದೇ ಕಂಪೌಂಡ್ ನಲ್ಲಿ ಇದ್ದ ಇನ್ನೊಂದು ಮನೆಯಲ್ಲಿ ಬಾಡಿಗೆಗೆ ವಾಸ ಮಾಡಿಕೊಂಡಿದ್ದು , ಮಹಿಳೆಗೆ 4 ವರ್ಷದ ಹೆಣ್ಣು ಮಗು, ಇನ್ನೊಬ್ಬ ಗಂಡು ಮಗ ಇದ್ದು, ಬಾಡಿಗೆ ಹಣದ ವಿಷಯದಲ್ಲಿ ಇಬ್ಬರ ನಡುವೆ ಮನಸ್ತಾಪ ಇದ್ದು, ಮಹಿಳೆ ನೀಡಿದ ದೂರಿನಂತೆ ತನ್ನ 4 ವರ್ಷದ ಹೆಣ್ಣು ಮಗಳು ಅವಳ ಅಣ್ಣನ ಜೊತೆ ಆಟವಾಡುತಿದ್ದು, ಆರೋಪಿಯು ಬಂದು ಮಗುವನ್ನು ಮನೆಯ ಹಿಂಬಾಗದ ಬಟ್ಟೆ ಒಗೆಯುವ ಕಲ್ಲಿನ ಬಳಿಗೆ ಕರೆದುಕೊಂಡು ಹೋಗಿ ತಾರೀಕು 26.6.2026 ರಂದು ಲೈಂಗಿಕ ದೌರ್ಜನ್ಯ ಮಾಡಿದ್ದು, ತಾರೀಕು 14.7.2026 ರಂದು ಮಗು ಜ್ವರದಿಂದ ಬಳಲುತ್ತಿದ್ದು, ಉಳ್ಳಾಲದ ಸರಕಾರಿ ಆಸ್ಪತ್ರೆಗೆ ಕೊಂಡು ಹೋಗಿ ಪರೀಕ್ಷಿಸಿದಾಗ ಲೈಂಗಿಕ ಹಲ್ಲೆ ಆದ ಬಗ್ಗೆ ವೈದ್ಯರು ಪರೀಕ್ಷಿಸಿ ನುಡಿದಿದ್ದು ಅಲ್ಲದೆ ಮಗು ಸಹ ನನ್ನಲ್ಲಿ ಆರೋಪಿಯಾದ ಚಂದ್ರಹಾಸ ನನಗೆ ಲೈಂಗಿಕ ದೌರ್ಜನ್ಯ ನೀಡಿದ್ದಾರೆ ಎಂಬ ಹೇಳಿಕೆಯಂತೆ ಅಪರಾದ ಕ್ರಮ ಸಂಖೆ 128/26 ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಕಲಂ 75 BNS ಹಾಗು ಕಲಂ 4,8, POCSO ಕಾಯಿದೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಬಂಧನವಾಗಿತ್ತು.

ನಂತರ ಆರೋಪಿ ಹಾಗು ಆರೋಪಿಯ ಕುಟುಂಬಸ್ಥರು ಪ್ರಕರಣದ ಸತ್ಯಾಸತ್ಯತೆಯನ್ನು ವಕೀಲರಿಗೆ ತಿಳಿಸಿದ್ದು ಬಾಡಿಗೆಯ ವಿಚಾರದಲ್ಲಿ ಇಬ್ಬರ ನಡುವೆ ಗಲಾಟೆ ಏರ್ಪಟ್ಟಿದ್ದು, ಈ ಕಾರಣಕ್ಕೆ ಸುಳ್ಳು ಕೇಸನ್ನು ದಾಖಲಿಸಲಾಗಿದೆ ಎಂದು ಪ್ರತಿಪಾದಿಸಿದ್ದು ಮತ್ತು ಮಹಿಳೆಯ ಹೇಳಿಕೆಯಂತೆ ತಾರೀಕು 26.6.2026 ರಂದು ಲೈಂಗಿಕ ಹಲ್ಲೆ ನಡೆದಿದೆ ಎಂಬ ದಿನಾಂಕ ಮತ್ತು ಸಮಯದಲ್ಲಿ ಮಗು ಮತ್ತು ದೂರುದಾರ ಮಹಿಳೆ ಉಳ್ಳಾಲದ ಚೀರುಂಬ ಭಗವತಿ ಕ್ಷೇತ್ರದಲ್ಲಿದ್ದು ಈ ಬಗ್ಗೆ ಅಲ್ಲಿನ CC ಕ್ಯಾಮೆರಾ ದೃಶ್ಯಾವಳಿಯನ್ನು ಸೀಜ್ ಮಾಡುವಂತೆ ವಕೀಲ ಶಿವಾನಂದ ಎಂ ವಕ್ಕೆತ್ತಿರಿ ವಿಟ್ಲ ನ್ಯಾಯಾಲಯಕ್ಕೆ ಕಲಂ 94 BNSS ಅಡಿಯಲ್ಲಿ ಅರ್ಜಿ ಸಲ್ಲಿಸಿದ ತಕ್ಷಣ ಎಚ್ಚೆತ್ತಗೊಂಡ ದೂರುದಾರ ಮಹಿಳೆ ನಾನು ಆಘಾತಕ್ಕೊಳಗಾಗಿ ಪ್ರಕರಣ ನಡೆದದ್ದು 26.6.2026 ಎಂದು ನುಡಿದಿದ್ದು ಘಟನೆ 5.7.26 ರಂದು ನಡೆದಿದೆ ಎಂದು ಸಂಶಯಾಸ್ಪದ ಮರು ಹೇಳಿಕೆಯನ್ನು ನೀಡಿದ್ದು, ಇವಳ ದ್ವಂದ್ವ ಹೇಳಿಕೆ, ಬಾಡಿಗೆ ವಿಚಾರದಲ್ಲಿ ಗಲಾಟೆ, ಆರೋಪಿ ವಕೀಲರು CC ಟಿವಿ ಜಪ್ತಿಗಾಗಿ ಅರ್ಜಿ ಹಾಕಿದ ನಂತರ ಘಟನೆಯ ದಿನಾಂಕ ಬದಲಾವಣೆ ಇದನ್ನೆಲ್ಲ ಗಮನಿಸಿದ ಪೋಕ್ಸೋ ನ್ಯಾಯಾಲಯದ ನ್ಯಾಯಾಧೀಶರಾದ ಮನು ಕೆ ಎಸ್ ರವರು ಪ್ರಸ್ತುತ ಸ್ಥಿತಿಯಲ್ಲಿ ಘಟನೆಯ ಹಾಗು ದೂರುದಾರ ಮಹಿಳೆ ಕೊಟ್ಟ ದೂರಿನ ಮೇಲೆ ಸಂಶಯ ವ್ಯಕ್ತ ಪಡಿಸಿ , ದೂರುದಾರ ಆರೋಪಿಯನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂಬ ಆರೋಪಿಯ ವಕೀಲರ ವಾದವನ್ನು ಅಲ್ಲಗಳೆಯುವಂತಿಲ್ಲ ಎಂದು ನ್ಯಾಯಾಲಯ ತೀರ್ಮಾನಕ್ಕೆ ಬಂದು ಆರೋಪಿ ಚಂದ್ರಹಾಸ.ಯು ಇವರಿಗೆ ಕ್ರಿಮಿನಲ್ ಮಿಸ್ ಕೇಸ್ ನಂಬರ್ 770/2026 ರಲ್ಲಿ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿ ಪರ ವಕೀಲ ಶಿವಾನಂದ ಎಂ ವಕ್ಕೆತ್ತಿರಿ ವಿಟ್ಲ, ಮಿತೇಶ್ ಪೂಜಾರಿ, ಸಜಿನಿ ಮೋಹನ ,ಅಭಿಲಾಶ್ ಶಾಸ್ತ್ರಿ ವಾದ ಮಂಡಿಸಿದ್ದರು

Share This Article
Leave a Comment