ಸುಳ್ಯ: ಸರ್ಕಾರಿ ಆಂಬ್ಯುಲೆನ್ಸ್ ಚಾಲಕ ಹಠಾತ್ ಹೃದಯಾಘಾತದಿಂದ ಸಾವು

Prakhara News
0 Min Read

ಸುಳ್ಯ: ಸುಳ್ಯದಲ್ಲಿ ಸರ್ಕಾರಿ ಆಂಬ್ಯುಲೆನ್ಸ್ ಚಾಲಕರಾಗಿ ಕೆಲಸ ಮಾಡಿ ಕಳೆದ ವರ್ಷವಷ್ಟೇ ಸುಬ್ರಹ್ಮಣ್ಯಕ್ಕೆ ವರ್ಗಾವಣೆಯಾಗಿದ್ದ ಆಂಬ್ಯುಲೆನ್ಸ್ ಚಾಲಕ ಮಾಧವ (45 ವರ್ಷ) ಹೃದಯಾಘಾತದಿಂದ ಹಠಾತ್ ಸಾವಿಗೀಡಾಗಿರುವ ಘಟನೆ ಇದೀಗ ನಡೆದಿದೆ.

ಮನೆಯಲ್ಲಿ ಇದ್ದ ವೇಳೆ ಅವಘಡ ಸಂಭವಿಸಿದೆ. ತಕ್ಷಣವೇ ಅವರನ್ನು ಸುಳ್ಯದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಅಲ್ಲಿಗೆ ತಲುಪುವಾಗ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಸ್ತುತ ಅವರು ಕುಟುಂಬದೊಂದಿಗೆ ಕಾಣಿಯೂರಿನಲ್ಲಿ ವಾಸವಾಗಿದ್ದರು.

Share This Article
Leave a Comment