ಮಂಗಳೂರು : ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದಿಂದಾಗಿ ಮೊಟ್ಟೆ ದರ ಗಣನೀಯವಾಗಿ ಕುಸಿತ ಕಂಡಿದೆ. ವಿದೇಶಗಳಿಗೆ ರಫ್ತು ಸ್ಥಗಿತಗೊಂಡಿದೆ. ಇದು ಅಂತಾರಾಷ್ಟ್ರೀಯ ಮಾರುಕಟ್ಟೆ ಮೇಲೆ ಪ್ರಭಾವ ಬೀರಿದ್ದರೆ, ಜನಸಾಮಾನ್ಯರ ಜೇಬಿಗೆ ತುಸು ಸಮಾಧಾನ ತಂದಿದೆ.


ಒಂದು ಕಡೆ ಮಧ್ಯಪ್ರಾಚ್ಯ ರಾಷ್ಟ್ರಗಳ ನಡುವಿನ ಯುದ್ಧದ ಕಾರ್ಮೋಡ ಹಾಗೂ ರಮ್ಜಾನ್ ಉಪವಾಸದ ಸಂಭ್ರಮ ಮನೆಮಾಡಿದ್ದರೆ, ಇನ್ನೊಂದೆಡೆ ಇವೆರಡೂ ಅಂಶಗಳು ಭಾರತದ ಮೊಟ್ಟೆ ಮಾರುಕಟ್ಟೆಯ ಮೇಲೆ ಅನಿರೀಕ್ಷಿತ ಪರಿಣಾಮ ಬೀರಿವೆ. ರಫ್ತು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮೊಟ್ಟೆ ದರ ದಿಢೀರ್ ಕುಸಿತ ಕಂಡಿದ್ದು, ಜನಸಾಮಾನ್ಯರ ಜೇಬಿಗೆ ತುಸು ಸಮಾಧಾನ ತಂದಿದೆ.

ರಫ್ತು ಸ್ಥಗಿತ: ಭಾರತದಲ್ಲಿಉತ್ಪಾದನೆಯಾಗುವ ಒಟ್ಟು ಮೊಟ್ಟೆಗಳಲ್ಲಿಸುಮಾರು ಶೇ.80ರಷ್ಟು ಮೊಟ್ಟೆಗಳು ಕೊಲ್ಲಿರಾಷ್ಟ್ರಗಳಿಗೆ ರಫ್ತಾಗುತ್ತಿದ್ದವು. ಆದರೆ, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿನಡೆಯುತ್ತಿರುವ ಯುದ್ಧದ ಭೀತಿಯಿಂದಾಗಿ ಸಾರಿಗೆ ವ್ಯವಸ್ಥೆ ಏರುಪೇರಾಗಿದ್ದು, ರಫ್ತು ಸಂಪೂರ್ಣವಾಗಿ ಸ್ಥಗಿತವಾಗಿದೆ.

ರಮ್ಜಾನ್ ಉಪವಾಸದ ಅವಧಿಯಲ್ಲಿಮಾರುಕಟ್ಟೆಯ ಬೇಡಿಕೆಯಲ್ಲಾದ ಬದಲಾವಣೆಗಳು ಸಹ ಬೆಲೆ ಇಳಿಕೆಗೆ ಪೂರಕವಾಗಿವೆ. ಹೊರದೇಶಗಳಿಗೆ ಹೋಗಬೇಕಿದ್ದ ಮೊಟ್ಟೆಗಳ ದಾಸ್ತಾನು ಈಗ ದೇಶೀಯ ಮಾರುಕಟ್ಟೆಯನ್ನೇ ಅವಲಂಬಿಸಿದೆ. ಇದರಿಂದಾಗಿ ಸಗಟು ಮತ್ತು ಚಿಲ್ಲರೆ ದರಗಳಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ.
ಬೆಲೆ ಏರಿಕೆಯ ಬಿಸಿಯಲ್ಲಿ ಬೆಂದಿದ್ದ ಜನಸಾಮಾನ್ಯರಿಗೆ ಈ ‘ಮೊಟ್ಟೆ ದರ ಕುಸಿತ’ ದೊಡ್ಡ ನಿರಾಳತೆ ನೀಡಿದೆ. ಮೊಟ್ಟೆ ಪ್ರಿಯರು ಈ ಬೆಲೆ ಇಳಿಕೆಯನ್ನು ಸಂಭ್ರಮದಿಂದ ಸ್ವಾಗತಿಸಿದ್ದು, ಮಾರುಕಟ್ಟೆಯಲ್ಲಿಖರೀದಿ ಚುರುಕುಗೊಂಡಿದೆ.
ರಫ್ತು ಮಾರುಕಟ್ಟೆ ಚೇತರಿಸಿಕೊಳ್ಳುವವರೆಗೆ ಈ ಕಡಿಮೆ ದರ ಮುಂದುವರಿಯುವ ಸಾಧ್ಯತೆಯಿದೆ. ಇದು ಕುಕ್ಕುಟೋದ್ಯಮಿಗಳಿಗೆ ತುಸು ಆತಂಕ ತಂದಿದ್ದರೂ, ಪ್ರೋಟೀನ್ ಯುಕ್ತ ಆಹಾರವನ್ನು ಕಡಿಮೆ ದರದಲ್ಲಿಪಡೆಯುತ್ತಿರುವ ಗ್ರಾಹಕರಿಗೆ ಮಾತ್ರ ಇದು ನಿಜಕ್ಕೂ ಹಬ್ಬದ ಸುದ್ದಿಯಾಗಿದೆ.
ಮೊಟ್ಟೆಯ ದರ ಗ್ರಾಹಕರಿಗೆ ಕೈಗೆಟಕುವ ದರಕ್ಕೆ ಬಂದಿಳಿದಿದ್ದು ಮಾರುಕಟ್ಟೆ ಚುರುಕು ಕಂಡಿದೆ. ಒಮ್ಮೆ ಗಗನಕ್ಕೇರಿದ ಮೊಟ್ಟೆಯ ಬೆಲೆ ಇದೀಗ ಒಮ್ಮೆಲೇ ಕಡಿಮೆಯಾಗಿರುವುದು ಮಾರುಕಟ್ಟೆಯಲ್ಲಿ ಬೇಡಿಕೆ ಬದಲಾವಣೆಗಳಾಗಿವೆ.


