ಉಡುಪಿ: ಗರುಡ ಗ್ಯಾಂಗ್ ಮೇಲೆ ದಾಳಿ ನಡೆಸಲು ಸ್ಕೆಚ್- ಮಾರಕಾಯುಧ ಸಹಿತ ಯುವಕ‌ ವಶಕ್ಕೆ..!

Prakhara News
1 Min Read

ಉಡುಪಿ:ಗರುಡ ಗ್ಯಾಂಗ್ ಮೇಲೆ ಮಾರಕಾಯುಧದಿಂದ ಅಟ್ಯಾಕ್ ಮಾಡಲು ಕಾಯುತ್ತಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲ ವಿದ್ಯಾರತ್ನ‌ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಬಾಗದ ರಸ್ತೆಯಲ್ಲಿ ನಿಂತು ಗರುಡ ಗ್ಯಾಂಗ್ ನ
ದಾವೂದ್, ಇಸಾಕ್ ಹಾಗೂ ಕೆಲವರ ಮೇಲೆ ವೈಮನಸ್ಸಿನ ಹಿನ್ನಲೆಯಲ್ಲಿ ಸ್ಕೆಚ್ ಹಾಕುತ್ತಿದ್ದ ಉಡುಪಿಯ ಕಿನ್ನಿಮೂಲ್ಕಿಯಲ್ಲಿರುವ ಮಾಂಡವಿ ಪ್ಯಾರಡೈಸ್ ನಿವಾಸಿ ಮಹಮ್ಮದ್ ಪರ್ವೇಜ್ (26)ನನ್ನು ಮಣಿಪಾಲ ಪೊಲೀಸರು ಬಂಧಿಸಿದ್ದಾರೆ.

ಆರೋಪಿಯಿಂಸ ಸುಮಾರು 20 ಇಂಚು ಉದ್ದ 2 ಇಂಚು ಅಗಲದ ನೀಲಿ ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಲಾಂಗ್ , ಸುಮಾರು 16 ಇಂಚು ಉದ್ದ 1.5 ಇಂಚು ಅಗಲದ ಹಸಿರು ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಚಾಕು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ದ ಈಗಾಗಲೇ ಉಡುಪಿ ನಗರ, ಶಿರ್ವ, ಸೆನ್ ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಪ್ರಕರಣಗಳು ದಾಖಲಾಗಿದೆ. ಆರೋಪಿಗೆ ನ್ಯಾಯಾದೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಕೆಲ ವರ್ಷಗಳ ಹಿಂದೆ ಗರುಡ ಗ್ಯಾಂಗ್ ನ ನಡುವೆ ವೈಮನಸ್ಸು ಉಂಟಾಗಿ ನಡು ರಸ್ತೆಯಲ್ಲೇ ಮಾರಕಾಯುಧಗಳಿಂದ ಹೊಡೆದಾಡಿಕೊಂಡು ಆತಂಕ ಸೃಷ್ಟಿಸಿದ್ದರು. ಈಗ ಮತ್ತೆ ಅಲ್ಲಲ್ಲಿ ಚದುರಿದ ಗರುಡ ಗ್ಯಾಂಗ್ ಸದಸ್ಯರು ಈ ರೀತಿ ಮಾರಕಾಯುಧ ಹಿಡಿದು ಕೊಲೆಗೆ ಪ್ಲ್ಯಾನ್ ಮಾಡುತ್ತಿರೋದು ಮತ್ತೆ ಭಯದ ವಾತಾವರಣ ನಿರ್ಮಾಣವಾಗುತ್ತಿದ್ದು ಗ್ಯಾಂಗ್ ನ ಎಲ್ಲರನ್ನು ಹೆಡೆಮುರಿ ಕಟ್ಟಿ ಗಡಿಪಾರು ಮಾಡುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article
Leave a Comment