ನೆಲ್ಯಾಡಿ: ಕಳೆದ ಮಾರ್ಚ್ 29 ರಂದು ಅಗಲಿದ ನೆಲ್ಯಾಡಿ ನಿವಾಸಿ ಸುದೀಪ್ ರೈ ಸ್ಮರಣಾರ್ಥ ಶ್ರೀ ಜಮಾಲ್ ಕೊಲ್ಪೆಯವರು ಇದೇ ಬರುವ ಮೇ 24 ಆದಿತ್ಯವಾರದಂದು ಬೆಳಗ್ಗೆ 9 ಗಂಟೆಗೆ ನೆಲ್ಯಾಡಿ ಗಾಂಧಿ ಮೈದಾನದಲ್ಲಿ ಗ್ರಾಮ ಸೀಮಿತ “ಸೌಹಾರ್ದ ಟ್ರೋಫಿ” ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿದ್ದಾರೆ.


ಈ ಪಂದ್ಯಾಟವು ಗ್ರಾಮ ಗ್ರಾಮಗಳ 14 ತಂಡಗಳ ನಡುವೆ ನಡೆಯಲಿದ್ದು ಪ್ರಥಮ ಬಹುಮಾನ ರೂ.15,000 ನಗದು ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ.10,000 ಹಾಗೂ ಟ್ರೋಫಿಯನ್ನು ನೀಡಿ ಗೌರವಿಸಲಾಗುತ್ತದೆ ಎಂದು ಆಯೋಜಕರು ತಿಳಿಸಿದ್ದಾರೆ.




