ಮುಂಬೈ: ಮಹಾ ಮಳೆಗೆ 4 ಅಂತಸ್ತಿನ ಚಾಲ್ ಕಟ್ಟಡ ಕುಸಿದು 6 ಮಂದಿ ಮೃತ್ಯು..!

Prakhara News
1 Min Read

ಮುಂಬೈ: ನಗರದ ಮನ್ಖುರ್ದ್ ಪ್ರದೇಶದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ನಾಲ್ಕು ಅಂತಸ್ತಿನ ಚಾಲ್‌ ಕಟ್ಟಡ ಕುಸಿದು 6 ಮಂದಿ ದುರ್ಮರಣಕ್ಕೀಡಾಗಿದ್ದದಾರೆ.

ಮನ್ಖುರ್ದ್ ಪ್ರದೇಶದಲ್ಲಿರೋ ಹನುಮ ಮಂದಿರದ ಹಿಂದಿರುವ ಜನತಾ ನಗರದ ಚಾಲ್ ಸಂಖ್ಯೆ 5 ರಲ್ಲಿ ರಾತ್ರಿ 8.30ರ ಸುಮಾರಿಗೆ ದುರಂತ ಸಂಭವಿಸಿದೆ. ಚಾಲ್‌ ಅಂದ್ರೆ ಮುಂಬೈ ನಗರದಲ್ಲಿ ಕಂಡುಬರುವ ಒಂದು ವಿಶಿಷ್ಟವಾದ ವಸತಿ ಶೈಲಿಯಾಗಿದೆ.

ಅಧಿಕಾರಿಗಳ ಪ್ರಕಾರ, ನೆಲ ಮತ್ತು 3ನೇ ಅಂತಸ್ತಿನ ಕಟ್ಟಡದ ಒಂದು ಭಾಗ ಇದ್ದಕ್ಕಿದ್ದಂತೆ ಕುಸಿದು 6 ಜನ ಮೃತಪಟ್ಟಿದ್ದು, ಶವಗಳು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿವೆ. ಘಟನೆ ಬಳಿಕ ರಕ್ಷಣಾ ತಂಡಗಳು ಸ್ಥಳಕ್ಕೆ ದೌಡಾಯಿಸಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿರುವ ಮೃತದೇಹಗಳನ್ನು ಹೊರತೆಗೆಯುವ ಕಾರ್ಯಾಚರಣೆ ಕೈಗೊಂಡಿವೆ.

ಮುಂಬೈ ಅಗ್ನಿಶಾಮಕ ದಳ (MFB), ಮುಂಬೈ ಪೊಲೀಸರು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (BMC) ವಾರ್ಡ್ ಕಚೇರಿ ಮತ್ತು 108 ಆಂಬ್ಯುಲೆನ್ಸ್ ಸೇವೆಯ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.

Share This Article
Leave a Comment