ಮಂಗಳೂರು: ಭಾರತೀಯ ಅಂಚೆ ಇಲಾಖೆಯು ಸಾಮಾನ್ಯ ಜನರನ್ನು ತಲುಪಲು ಮತ್ತು ಸರ್ಕಾರದ ವಿವಿಧ ಜನಪರ ಯೋಜನೆಗಳ ಕುರಿತು ಜಾಗೃತಿ ಮೂಡಿಸಲು ಹಮ್ಮಿಕೊಳ್ಳುವ ಒಂದು ಮಹತ್ವದ ಅಭಿಯಾನವಾಗಿದೆ.


ಯುವವಾಹಿನಿ(ರಿ.) ಶಕ್ತಿನಗರ ಘಟಕ, ಬ್ರಹ್ಮಶ್ರೀ ಗುರುನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.) ಕುಂಟಲ್ಪಾಡಿ ಹಾಗೂ ಭಾರತೀಯ ಅಂಚೆ ಇಲಾಖೆಯ ಸಹಯೋಗದಲ್ಲಿ ದಿನಾಂಕ 25-10-2026, ಭಾನುವಾರ, ಶಕ್ತಿನಗರದ ತುಳುವೆರೆ ಕೂಟ ಸಭಾಂಗಣದಲ್ಲಿ ಉಚಿತ ಆಧಾರ್ ತಿದ್ದುಪಡಿ ಹಾಗೂ ನೋಂದಾವಣಿ ಶಿಬಿರ ಆಯೋಜಿಸಲಾಗಿದೆ.
ಈ ಶಿಬಿರದ ಜೊತೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ಅಪಘಾತ ವಿಮೆ, ಜೀವ ವಿಮೆ ಹಾಗೂ ಆರೋಗ್ಯ ವಿಮೆ ಸೌಲಭ್ಯಗಳ ಕುರಿತಾದ ಮಾಹಿತಿ ಮತ್ತು ಸೇವೆಗಳನ್ನು ಸಹ ಒದಗಿಸಲಾಗುತ್ತದೆ. ಆದ್ದರಿಂದ ಸಾರ್ವಜನಿಕರು ಈ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳುವಂತೆ ಯುವವಾಹಿನಿ(ರಿ.) ಶಕ್ತಿನಗರ ಘಟಕ ವಿನಂತಿ ಮಾಡಿದ್ದಾರೆ.



