ಪುತ್ತೂರು: ತಾಲೂಕಿನ ಕೆಯ್ಯೂರು ಗ್ರಾಮದ ಮಾಡಾವು ಸಣಂಗಲ ಎಸ್ಎಸ್ ಮಂಜಿಲ್ನ ದಿ.ಬಡುವನ್ ಕುಂಞ, ನಫೀಸಾ ದಂಪತಿಯ ಪುತ್ರಿ, ಮುಳ್ಳೇರಿಯದ ಸಮೀಪದ ಪಳ್ಳಪ್ಪಾಡಿಯ ಜೈನುದ್ದೀನ್ ಅವರ ಪತ್ನಿ ಸೆರಿನ (27) ಅವರ ಮೃತದೇಹ ಮೇ.27ರಂದು ಸಂಜೆ ಮನೆ ಸಮೀಪದ ಶೆಡ್ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.


ಸೆರಿನಾ ಅವರ ಸಾವು ಅನುಮಾನಾಸ್ಪದವಾಗಿದೆ. ಗಂಡ ಮತ್ತು ಕುಟುಂಬದವರು ಮಕ್ಕಳಿಲ್ಲವೆಂದು ಹೇಳಿ ಕಿರುಕುಳ ನೀಡುತಿದ್ದರು ಎಂದು ಸಹೋದರ ಅಬ್ದುಲ್ ರೆಹಮಾನ್ ಆರೋಪಿಸಿದ್ದು, ಅವರು ನೀಡಿದ ದೂರಿನ ಮೇರೆಗೆ ಆದೂರು ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.



