ಟೂಲ್‌ಕಿಟ್ ರಾಜಕೀಯದಿಂದ ದೇಶದ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ -ಜನರನ್ನು ದಾರಿತಪ್ಪಿಸುವ ಶಕ್ತಿಗಳಿಗೆ ಪ್ರಜಾಪ್ರಭುತ್ವದ ಮೂಲಕವೇ ತಕ್ಕ ಉತ್ತರ ಸಿಗಲಿದೆ : ಮಹಮ್ಮದ್ ಅಸ್ಗರ್

Prakhara News
1 Min Read

ಮಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ಕಳೆದ 12 ವರ್ಷಗಳಿಂದ ವಿವಿಧ ರೀತಿಯ ಟೂಲ್‌ಕಿಟ್ ರಾಜಕೀಯ ನಡೆಯುತ್ತಲೇ ಬಂದಿದೆ. ಆದರೆ ದೇಶದ ಹಿತಾಸಕ್ತಿಯನ್ನು ಕಾಪಾಡುವ ದೃಢ ನಿಲುವಿನೊಂದಿಗೆ ಕೇಂದ್ರ ಸರ್ಕಾರ ಪ್ರತಿಯೊಂದು ಸುಳ್ಳು ಪ್ರಚಾರಕ್ಕೂ ಸಮರ್ಥ ಉತ್ತರ ನೀಡುತ್ತಾ ಬಂದಿದೆ.

ಇಂದು ಕೆಲವು ಶಕ್ತಿಗಳು ಜನರನ್ನು ದಾರಿತಪ್ಪಿಸಲು ಹೊಸ ಮುಖವಾಡ ಧರಿಸಿ ಬಂದರೂ, ಸತ್ಯ ಮತ್ತು ಅಭಿವೃದ್ಧಿಯ ಪರ ಇರುವ ಜನತೆ ಎಲ್ಲವನ್ನೂ ಗಮನಿಸುತ್ತಿದ್ದಾರೆ. “ಕಾಕ್ರೋಚ್ ಜನತಾ ಪಾರ್ಟಿ” ಎಂಬಂತಹ ರಾಜಕೀಯ ನಾಟಕಗಳಿಗೂ ಜನರು ತಕ್ಕ ಪಾಠ ಕಲಿಸುವ ದಿನ ದೂರದಲ್ಲಿಲ್ಲ.

ದೇಶದ ಏಕತೆ, ಅಭಿವೃದ್ಧಿ ಮತ್ತು ರಾಷ್ಟ್ರಭಕ್ತಿಯ ವಿರುದ್ಧ ನಡೆಯುವ ಪ್ರತಿಯೊಂದು ಕುತಂತ್ರಕ್ಕೂ ಪ್ರಜಾಪ್ರಭುತ್ವದ ಮೂಲಕವೇ ಸಮರ್ಥ ಉತ್ತರ ಸಿಗಲಿದೆ.
ಮಹಮ್ಮದ್ ಅಸ್ಗರ್, ವಕೀಲರು

Share This Article
Leave a Comment