ಮಂಗಳೂರು: ದಾಸ್ ಪ್ರಮೋಷನ್ಸ್ ಮಂಗಳೂರು ನವೀಕೃತ ಕೇಂದ್ರ ಕಚೇರಿಯ ಉದ್ಘಾಟನೆ ನಗರದ ಕಂಕನಾಡಿಯ ಎಂಪೋರಿಂ ಕಾಂಪ್ಲೆಕ್ಸ್‌ನಲ್ಲಿ ಭಾನುವಾರ ನೆರವೇರಿತು. ರಾಜ್ಯ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು. ಟಿ. ಖಾದರ್‌ಉದ್ಘಾಟಿಸಿ ಶುಭ ಹಾರೈಸಿದರು.


ಶ್ರೀ ಕ್ಷೇತ್ರ ಕಟೀಲಿನ ಮುಖ್ಯ ಅರ್ಚಕ ಕಮಲಾದೇವಿ ಪ್ರಸಾದ್ ಅಸ್ರಣ್ಣರು ದೀಪ ಬೆಳಗಿಸಿ ಆಶೀರ್ವಚನ ನೀಡಿದರು. ದೈಜಿ ವರ್ಲ್ಡ್ ಮೀಡಿಯಾ ಸಂಸ್ಥಾಪಕ ವ್ವಾಲ್ಟರ್ ನಂದಳಿಕೆ ನಾಮಪಲಕ ಅನಾವರಗೊಳಿಸಿ ಸಂಸ್ಥೆಯ ಬೆಳವಣಿಗೆಯ ಬಗ್ಗೆ ಶ್ಲಾಘಿಸಿದರು. ಖ್ಯಾತ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ್ತಿ ಧನಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು.

ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ಪಣೋಲಿ ಬೈಲು ಭಂಡಾರ ಮನೆಯ ರಮೇಶ್,ಧಾರ್ಮಿಕ ಪರಿಷತ್ ಸದಸ್ಯ ದೇವಪ್ಪ ಪಂಜಿಕಲ್ಲು, ಪ್ರಮುಖರಾದ ಸೌಂದರ್ಯ ರಮೇಶ್, ಸುರೇಶ್ ನಾವೂರ್, ಬಿಜೆಪಿ ಜಿಲ್ಲಾ ಮುಖಂಡರಾದ ಧನಲಕ್ಷ್ಮಿ ಗಟ್ಟಿ, ಮಹಾಬಲ ಕೊಟ್ಟಾರಿ, ನಾಗೇಂದ್ರ ಕುಮಾರ್, ಕುದ್ರೋಳಿ ಗಣೇಶ್, ಡಾ. ಅಯ್ಯ ಕುಲಾಲ್, ದಯಾನಂದ್ ಅಡ್ಯಾರ್, ಜಯರಾಜ್ ಪ್ರಕಾಶ್ ಮತ್ತಿತರು ಆಗಮಿಸಿ ಶುಭಹಾರೈಸಿದರು.






