ಮತ್ತೆ ಗರಿಗೆದರಿದ ಅಶೋಕ್ ರೈ ಗೆ ಸಚಿವ ಸ್ಥಾನ ವಿಚಾರ:ಹೈಕಮಾಂಡ್ ಬುಲಾವ್- ದೆಹಲಿಗೆ ಪ್ರಯಾಣ ಬೆಳೆಸಿದ ಶಾಸಕ ಅಶೋಕ್ ರೈ

Prakhara News
1 Min Read

ಪುತ್ತೂರು: ಡಿಕೆಶಿ ಸಚಿವ ಸಂಪುಟದಲ್ಲಿ ಪುತ್ತೂರು ಶಾಸಕ ಅಶೋಕ್ ರೈ ಗೆ ಸಚಿವ‌ಸ್ಥಾನ ಸ್ಥಾನ ಸಿಗಲಿದೆ ಎಂದ ಸುದ್ದಿ ಸಿ ಎಂ ಪ್ರಮಾಣ ವಚನದ ವೇಳೆ ಹರಡಿತ್ತು.

ಮೊದಲ ಹಂತದ ಸಚಿವರ ಪಟ್ಟಿಯಲ್ಲಿ ಅವಕಾಶ ಸಿಗುತ್ತದೆ ಎಂದು ನಂಬಲಾಗಿತ್ತು. ಸಚಿವ ಸ್ಥಾನ ಸಿಗಲಿ ಎಂದು ಸರ್ವ ಧರ್ಮಿಯರೂ ದೇವರ ಮೊರೆ ಹೊಗಿದ್ದರು.

ಎರಡನೇ ಅವಧಿಯ ಸಚಿವ ಸಂಪುಟ ಕೆಲವೇ‌ದಿನದಲ್ಲಿ ನಡೆಯಲಿದೆ ಈ ನಡುವೆ ಶಾಸಕರಿಗೆ ದೆಹಲಿಯಿಂದ ಬುಲಾವ್ ಬಂದಿದೆ. ಶುಕ್ರವಾರ ಶಾಸಕರು ದೆಹಲಿಗೆ ತೆರಳಿದ್ದಾರೆ. ಹೈಕಮಾಂಡ್ ಏನು ಮಾಡುತ್ತೋ ಗೊತ್ತಿಲ್ಲ ಆದರೆ ಅಶೋಕ್ ರೈ ಅವರು ಮಾತ್ರ ಸಚಿವ ಪಟ್ಟ ಏರಲು ಒಂದೇ ಮೆಟ್ಟಿಲು ಬಾಕಿ ಎಂದು ಕೆಲವರು ಹೇಳುತ್ತಿದ್ದಾರೆ. ಅಶೋಕ್ ರೈ ಸಚಿವರಾದರೆ ಪುತ್ತೂರು ಪೂರ್ಣ ಅಭಿವೃದ್ದಿಯಾಗಲಿದೆ ಮತ್ತು ಒಂದೇ ವರ್ಷದೊಳಗೆ ಮೆಡಿಕಲ್ ಕಾಲೇಜು ಕೂಡಾ ಪೂರ್ಣವಾಗಬಹುದು ಎಂಬ ನಿರೀಕ್ಷೆ ಪುತ್ತೂರಿನ ನಾಗರಿಕರದ್ದು.

Share This Article
Leave a Comment