ಯು.ಟಿ. ಖಾದರ್‌ಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್ ಅವಾರ್ಡ್–2026’ ಗೌರವ; ಈ ಪ್ರಶಸ್ತಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆ

Prakhara News
1 Min Read

ಮಂಗಳೂರು: ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಅವರಿಗೆ ಅಮೆರಿಕದ ಪ್ರತಿಷ್ಠಿತ ‘ಗ್ಲೋಬಲ್ ಸಿವಿಕ್ ಲೀಡರ್‌ಶಿಪ್ ಅವಾರ್ಡ್–2026’ ಗೌರವ ಲಭಿಸಿದೆ.

ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿನ ಸೇವೆ, ಜನಪರ ಆಡಳಿತ ಹಾಗೂ ಸಮುದಾಯ ಆಧಾರಿತ ಅಭಿವೃದ್ಧಿ ಕಾರ್ಯಗಳನ್ನು ಪರಿಗಣಿಸಿ ಅಮೆರಿಕದ American Multi Ethnic Commission ಈ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಯು.ಟಿ. ಖಾದರ್ ಅವರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ಸ್ವೀಕರಿಸಲು ಯು.ಟಿ. ಖಾದರ್ ಅವರು ಮಂಗಳೂರಿನಿಂದ ಅಮೆರಿಕಕ್ಕೆ ತೆರಳಿದ್ದು, ಜುಲೈ 25ರಂದು ಇಲಿನಾಯ್ಸ್ ರಾಜ್ಯದ ನೇಪರ್‌ವಿಲ್‌ನ ಯೆಲ್ಲೋ ಬಾಕ್ಸ್ ಆಡಿಟೋರಿಯಂನಲ್ಲಿ ನಡೆಯುವ ಸಮಾರಂಭದಲ್ಲಿ ಗೌರವ ಸ್ವೀಕರಿಸಲಿದ್ದಾರೆ.

ಈ ಪ್ರಶಸ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಎಂಬ ವಿಶೇಷ ಗೌರವ ಯು.ಟಿ. ಖಾದರ್ ಅವರಿಗೆ ಸಂದಿದ್ದು, ಕರಾವಳಿ ಹಾಗೂ ಕರ್ನಾಟಕದ ಪಾಲಿಗೆ ಇದು ಹೆಮ್ಮೆಯ ಕ್ಷಣವಾಗಿದೆ. ರಾಜ್ಯದ ಆರೋಗ್ಯ ಕ್ಷೇತ್ರದ ಸೇವೆಗೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಾನ್ಯತೆ ದೊರೆತಂತಾಗಿದೆ.

Share This Article
Leave a Comment