ಎಪ್ರಿಲ್ 24 ರಂದು ಕರಾವಳಿಯಾದ್ಯಂತ “ದೇವ್ ದಾಸ್ ನ ಲೀಲಾ ” ತುಳು ಸಿನಿಮಾ ಬಿಡುಗಡೆ

Prakhara News
1 Min Read

ಮಂಗಳೂರು : ಜಯಂತಿ ಪ್ರೊಡಕ್ಷನ್ ಲಾಂಛನದಲ್ಲಿ ಡಿ.ಎಸ್ ಎಂಟರ್ಟೈನೆಂಟ್ಸ್, ಅಪ್ಸರಾ ಎಂಟರ್ಟೈನೆಂಟ್ಸ್ ಸಹಭಾಗಿತ್ವದಲ್ಲಿ ತೇಜೇಶ್ ಪೂಜಾರಿ, ದೀಪಕ್ ಸಿಂಗ್, ಅಪರಾ ಎಂಟರ್ಟೈನೆಂಟ್ಸ್ ನಿರ್ಮಾಣದ ಯಶಸ್ವಿ ತುಡರ್ ಎಂಬ ತುಳು ಸಿನಿಮಾವನ್ನು ನಿರ್ದೇಶನ ಮಾಡಿದ
ತೇಜೇಶ್ ಪೂಜಾರಿ ನಿರ್ದೇಶನ ತುಳು ಚಲನಚಿತ್ರ ದೇವ್ ದಾಸ್ ನ ಲೀಲಾ ಇದೇ ಎಪ್ರಿಲ್ 24 ರಂದು ಕರಾವಳಿಯಾದ್ಯಂತ ತೆರೆಗೆ ಬರಲಿದೆ ಎಂದು ನಿರ್ದೇಶಕ ತೇಜೇಶ್ ಪೂಜಾರಿ ಹೇಳಿದರು.

ನಗರದ ಪ್ರೆಸ್ ಕ್ಲಬ್‌ನಲ್ಲಿ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ ಚಿತ್ರದ ಟೀಸರ್ , ಹಾಡುಗಳು, ಟ್ರೇಲರ್ Jayanathi Production YouTube Channel ನಲ್ಲಿ ಬಿಡುಗಡೆಗೊಂಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದಲ್ಲಿ ನಾಯಕನಾಗಿ ಎಲ್ಟನ್ ಜೆಫ್ ಹಾಗೂ ನಾಯಕಿಯಾಗಿ ಅದ್ವಿತಿ ಶೆಟ್ಟಿ ಅಭಿನಯಿಸಿದ್ದಾರೆ, ವಿಭಿನ್ನವಾದ ಕಥೆಯನ್ನು ಹೊಂದಿದ ಈ ಚಿತ್ರದಲ್ಲಿ ತುಳು ಚಿತ್ರರಂಗದ ಹಾಸ್ಯ ದಿಗ್ಗಜರು ಅಭಿನಯಿಸಿದ್ದಾರೆ, ಉತ್ತಮವಾದ ಮನರಂಜನೆಯನ್ನು ಹೊಂದಿರುವ ಈ ಚಿತ್ರವನ್ನು ಕುಟುಂಬದ ಜೊತೆ ಕುಳಿತು ವೀಕ್ಷಿಸಿ ಆನಂದಿಸ ಬಹುದು ಎಂದರು.

ಚಿತ್ರದ ಚಿತ್ರೀಕರಣವನ್ನು ಒಟ್ಟು 35 ದಿನಗಳ ಕಾಲ ಮಂಗಳೂರು, ಮುಡಿಪು, ಬಜ್ಜೆ, ಬೆಂಗಳೂರು ಮುಂತಾದ ಕಡೆ ನಡೆಸಲಾಗಿದೆ, ಸಿನಿಮಾದಲ್ಲಿ ಒಟ್ಟು 7 ಹಾಡುಗಳಿದ್ದು ಬಾಲಿವುಡ್ ನ ಖ್ಯಾತ ಗಾಯಕ ಶಾನ್ ಮೊಟ್ಟಮೊದಲ ಬಾರಿಗೆ ತುಳು ಸಿನಿಮಾದಲ್ಲಿ ಹಾಡನ್ನು ಹಾಡಿದ್ದಾರೆ, ದಿವ್ಯ ಕುಮಾರ್, ದುರಂದರ್ ಖ್ಯಾತಿಯ ಶೆಹಜಾದ್ ಅಲಿ, ಅನಿರುದ್ಧ ಶಾಸ್ತ್ರಿ, ಪ್ರಕಾಶ್ ಮಹಾದೇವನ್ ಗಾಯನವು ಈ ಚಿತ್ರದಲ್ಲಿದೆ.
ಛಾಯಾಗ್ರಾಹಕರಾಗಿ ಸಂತೋಷ್ ಆಚಾರ್ಯ ಗುಂಪಲಾಜೆ, ಸಂಕಲನಕಾರರಾಗಿ ಗಣೇಶ್ ನಿರ್ಚಲ್, ಸಂಗೀತ ನಿರ್ದೇಶಕರಾಗಿ ಸಾಯಿಷ್ ಭಾರದ್ವಾಜ್ ಮತ್ತು ಪ್ಯಾಟ್ಸನ್ ಪಿರೇರಾ ಕಾರ್ಯ ನಿರ್ವಹಿಸಿದ್ದಾರೆ.

ತಾರಾಗಣದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಅರವಿಂದ್ ಬೋಳಾರ್, ನವೀನ್ ಡಿ ಪಡೀಲ್, ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಅನೂಪ್ ಸಾಗರ್,ಅನುಷಾ ರಾಜ್ , ವಿನಾಯಕ್ ಜಪ್ಪು, ಶೈಲಶ್ರೀ ಮುಲ್ಕಿ, ರಾಧೇಶ್ ಶೆಣೈ, ತಿಮ್ಮಪ್ಪ ಕುಲಾಲ್ ಅಭಿನಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಎಲ್ಟನ್ ಜೆಫ್, ಅದ್ವಿತಿ ಶೆಟ್ಟಿ, ಶೈಲಶ್ರೀ, ಅನೂಪ್ ಸಾಗರ್, ದೀಪಕ್ ಸಿಂಗ್ ಮುಂತಾದವರು ಉಪಸ್ಥಿತರಿದ್ದರು.

Share This Article
Leave a Comment