ಕೆ.ವಿ.ಕೆ ಸೇವಾ ಸಮಿತಿ(ರಿ) ವಾಸುಕಿನಗರ ಎಕ್ಕೂರು ಇವರ ವತಿಯಿಂದ 9 ನೇ ವರ್ಷದ ಬಿಸು ಹಬ್ಬ ಹಾಗೂ ಸಾರ್ವಜನಿಕ ಶೀ ಸತ್ಯನಾರಾಯಣ ಪೂಜೆ

Prakhara News
2 Min Read

ಮಂಗಳೂರು: ಎಕ್ಕೂರು ವಾಸುಕಿ ನಗರದ ಕೆ.ವಿ.ಕೆ ಸೇವಾ ಸಮಿತಿ(ರಿ) ಇವರ ವತಿಯಿಂದ 9 ನೇ ವರ್ಷದ ಬಿಸು ಹಬ್ಬ ಹಾಗೂ ಸಾರ್ವಜನಿಕ ಶೀ ಸತ್ಯನಾರಾಯಣ ಪೂಜಾ ಕಾರ್ಯಕ್ರಮವು 19 ಆದಿತ್ಯವಾರ 2026 ರಂದು ಸಂಜೆ 5 ಗಂಟೆಗೆ ಕೆ.ವಿ.ಕೆ ಮೈದಾನದಲ್ಲಿ ಜರುಗಿತು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂರ್ಭಿಸ್ಥಾನ ಶ್ರೀ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ ಜೆ. ಅನಿಲ್ ಶೆಟ್ಟಿ ಮನ್ಕುತೋಟ ಗುತ್ತು ವಹಿಸಿಕೊಂಡಿದ್ದರು.

ಕಾರ್ಯಕ್ರಮದ ಪ್ರಾಸ್ತಾವಿಕ ಹಾಗೂ ಸ್ವಾಗತ ಭಾಷಣವನ್ನು ಕೆ.ವಿ.ಕೆ ಸಮಿತಿಯ ಅಧ್ಯಕ್ಷರು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ನಿಕಟ ಪೂರ್ವ ಸದಸ್ಯರಾದ ಶ್ರೀಮತಿ ವೀಣಾ ಮಂಗಳ ರವರು ನಡೆಸಿದರು.

ಕಾರ್ಯಕ್ರಮದ ದೀಪ ಪ್ರಜ್ವಲನೆಯನ್ನು ಶ್ರೀಮತಿ ಬಿಂದಿಯಾ ಶೆಟ್ಟಿ ಮತ್ತು ಶ್ರೀ ಯೋಗೀಶ್ ಶೆಟ್ಟಿ ಮಣ್ಣಗುಡ್ಡೆ( Offshore Production Manager – Qatar Energy) ನಡೆಸಿದರು.

ಸಭಾ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಲೋಕಸಭಾ ಸದಸ್ಯರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀ ವೇದವ್ಯಾಸ ಕಾಮತ್, ಮಾಜಿ ಉಸ್ತುವಾರಿ ಸಚಿವರಾದ ಶ್ರೀ ಕೃಷ್ಣ ಜೆ ಪಾಲೆಮಾರ್ ಗೌರವ ಉಪಸ್ಥಿತರಿದ್ದರು.

ಸಮಿತಿಯ ವಾರ್ಷಿಕ ವರದಿ ವಾಚನವನ್ನು ಕಾರ್ಯದರ್ಶಿಯಾದ ಶ್ರೀಮತಿ ಹರಿಣಾಕ್ಷಿ ನೆರವೇರಿಸಿದರು.
ಸಭಾ ಕಾರ್ಯಕ್ರಮದ ನಡುವೆ ಮುಖ್ಯಮಂತ್ರಿ ಬೆಳ್ಳಿ ಪದಕ ಪಡೆದುಕೊಂಡ ಕಂಕನಾಡಿ ನಗರ ಠಾಣೆಯ ಸಿಬ್ಬಂದಿ ಶ್ರೀ ಜಯಾನಂದ. ಎನ್ ಹಾಗೂ ಕೆ.ವಿ.ಕೆ ಸೇವಾ ಸಮಿತಿಯ ಜೊತೆ ಕಾರ್ಯಶಿಯಾದ ಶ್ರೀ ವಾಲ್ಟರ್ ರವರಿಗೆ ಗೌರವ ಸನ್ಮಾನವನ್ನು ಸಲ್ಲಿಸಲಾಯಿತು.

ಅಲ್ಲದೆ ಪ್ರತೀ ವರ್ಷದಂತೆ ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ಕೆ.ವಿ.ಕೆ ಸೇವಾ ಸಮಿತಿ ವತಿಯಿಂದ ನೀಡಲಾಯಿತು.
ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿ ವಿಶ್ವ ಮೋಹನ ನೃತ್ಯ ಕಲಾಶಾಲೆಯ ಪ್ರತಿಭೆಗಳಿಂದ ಭರತನಾಟ್ಯ ನೃತ್ಯ ಪ್ರದರ್ಶನ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಸತೀಶ್ ಕುಂಪಲ, ಬಿಜೆಪಿ ಜಿಲ್ಲಾಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲೆ, ಶ್ರೀ ಗಣೇಶ್ ಶೆಟ್ಟಿ ಗುಡ್ಡೆಗುತ್ತು ಆಡಳಿತ ಮೊತ್ತೇಸರರು, ಶ್ರೀ ಸೂರ್ಯನಾರಾಯಣ ದೇವಸ್ಥಾನ ಮರೋಳಿ,ಶ್ರೀ ಲತೇಶ್ ಬಾಕ್ರಬೈಲು, ಕಾರ್ಯದರ್ಶಿ, ಅಖಿಲ ಭಾರತೀಯ ಸಾಹಿತ್ಯ ಪರಿಷತ್ ದ.ಕ,ಶ್ರೀ ಪ್ರವೀಣ್ ಚಂದ್ರ ಆಳ್ವ, ನಿಕಟಪೂರ್ವ ಕಾರ್ಪೊರೇಟರ್, ಕಂಕನಾಡಿ ‘ಬಿ’ ವಾರ್ಡ್ , ACP ವಿಜಯಕಾಂತಿ, ಶ್ರೀ ಯಶೋಧರ ಚೌಟ, ಅಧ್ಯಕ್ಷರು, ಹಿಂದೂ ಯುವ ಸೇನೆ ಕೇಂದ್ರೀಯ ಮಂಡಳಿ, ಮಂಗಳೂರು,ಶ್ರೀ ಲಂಚುಲಾಲ್ ಕೆ.ಎಸ್., ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಅಸ್ತ್ರ ಗ್ರೂಪ್ ,ಶ್ರೀ ನಿಶಾಂತ್ ಪೂಜಾರಿ, ಪ್ರೊ. ಈಶ್ವರಿ ಡೆವಲೋಪರ್ಸ್ & ಬಿಲ್ಡರ್ಸ್,ಶ್ರೀಮತಿ ಬಬಿತಾ ರೋಹಿತ್ ಸಾಲ್ಯಾನ್, ಪ್ರೊ: ರೋಹಿತ್ ವೈನ್ಸ್, ಜಪ್ಪಿನಮೊಗರು,ಶ್ರೀ ಹರೀಶ್‌ಚಂದ್ರ ತಂದೊಳಿಗೆ, ಅಧ್ಯಕ್ಷರು, ಪಿಲಿ ಚಾಮುಂಡಿ ಕ್ಷೇತ್ರ ತಂದೊಳಿಗೆ, ಶ್ರೀ ಬಿ.ವಿ. ನಾಗರಾಜ್, ಟ್ರಸ್ಟಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ,
ಶ್ರೀ ಮನೋಜ್ ಪೂಜಾರಿ, ಅಧ್ಯಕ್ಷರು, ಶ್ರೀ ನಾರಾಯಣ ಗುರು ಮಂದಿರ, ಶ್ರೀ ಜೋನ್ ಸುರೇಶ್, ಪ್ರೊ: ಜೆ.ಎಮ್.ಜೆ. ಕನ್ ಸ್ಟ್ರಕ್ಷನ್ ಮತ್ತು ಫೈನಾನ್ಸ್ ,ಶ್ರೀಮತಿ ಶ್ವೇತಾ ಎನ್.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಮಂಗಳೂರು ನಗರ ಇವರು ಭಾಗವಹಿಸಿದರು.
ಇನ್ನುಳಿದಂತೆ ಕೆ.ವಿ.ಕೆ ಸೇವಾಸಮಿತಿಯ ಗೌರವ ಅಧ್ಯಕ್ಷರಾದ ಶ್ರೀ ಈಶ್ವರ ಕೊಟ್ಟಾರಿ, ಉಪಾಧ್ಯಕ್ಷರಾದ ಶ್ರೀ ಉದಯ ಕುಮಾರ್ , ಜೊತೆ ಕಾರ್ಯದರ್ಶಿಯಾದ ಶ್ರೀ ಸತೀಶ್ ನಾಯಕ್ ಉಪಸ್ಥಿತರಿದ್ದರು. ಸಮಿತಿಯ ಕೋಶಾಧಿಕಾರಿಯಾದ ಶ್ರೀ ಸೌರಭ್ ಅಂಚನ್ ಧನ್ಯವಾದವನ್ನು ಸಮರ್ಪಿಸಿದರು.
ಪೂಜಾ ಕಾರ್ಯಕ್ರಮದ ಬಳಿಕ ಸಾವರ್ಜನಿಕ ಅನ್ನ ಸಂತರ್ಪಣೆಯು ಜರುಗಿತು.

Share This Article
Leave a Comment