ತುಳುನಾಡ ಸಂಸ್ಕಾರ,ಆಚಾರ ವಿಚಾರವನ್ನು ಮತ್ತು ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಅತ್ಯಂತ ಶ್ಲಾಘನೀಯ: ಲಯನ್ ಅನಿಲ್ ದಾಸ್

Prakhara News
2 Min Read

ಮಂಗಳೂರು: ಕುಲಾಲ ಸಂಘ ಕುಳಾಯಿ,ಕುಲಾಲ ಮಹಿಳಾ ಮಂಡಲ ಮತ್ತು ಕುಲಾಲ ರಜತ ಸೇವಾ ಟ್ರಸ್ಟ್ ವತಿಯಿಂದ ಕುಳಾಯಿ ಶ್ರೀ ವೆಂಕಟರಮಣ ಶಾಲೆಯಲ್ಲಿ ಆಯೋಜಿಸಿದ “ಇತ್ತೆದ ಆಟಿ” ಕಾರ್ಯಕ್ರಮದಲ್ಲಿ ತುಳುನಾಡ ಸಂಸ್ಕಾರ,ಆಚಾರ ವಿಚಾರವನ್ನು ಮತ್ತು ಆಟಿ ತಿಂಗಳಲ್ಲಿ ನಮ್ಮ ಹಿರಿಯರು ಅನುಭವಿಸಿದ ಕಷ್ಟವನ್ನು ಮುಂದಿನ ಪೀಳಿಗೆಗೆ ತಿಳಿಸುವ ಕಾರ್ಯ ಅತ್ಯಂತ ಶ್ಲಾಘನೀಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಜಿಲ್ಲಾಧ್ಯಕ್ಷ ಲಯನ್ ಅನಿಲ್ ದಾಸ್ ನುಡಿದರು.

ಜನಾರ್ಧನ್ ಸಾಲಿಯಾನ್ ಅವರು ಮಾತನಾಡಿ, ಈಗಿನ ಕಾಲದ ಆಟಿ ತಿಂಗಳಲ್ಲಿ ಜನರ ಬದುಕು ಮತ್ತು ಹಿಂದಿನ ಆಟಿ ತಿಂಗಳಲ್ಲಿ ನಮ್ಮ ಪೂರ್ವಿಕರ ಬದುಕಿನ ಬಗ್ಗೆ ತುಲನೆ ಮಾಡಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಸುರತ್ಕಲ್ ಕುಲಾಲ ಸಂಘದ ಅಧ್ಯಕ್ಷ ಬಾಬು ಚಂದ್ರ ಸುರತ್ಕಲ್, ವೆಟ್ರಿವಲ್ ಸಿರಾಮಿಕ್ಸ್ ಅಡ್ಯಾರ್ ಮಾಲಕಿ ಪ್ರಿಯ ಸತೀಶ್ ಕುಲಾಲ್ ತುಂಬೆ ಶುಭ ಹಾರೈಸಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಯನ್ ಅನಿಲ್ ದಾಸ್, ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ರಾಜ್ಯಾಧ್ಯಕ್ಷ ಸುಧಾಕರ್ ಸಾಲಿಯಾನ್,
ಮ್ಯಾರಥಾನ್ ನಲ್ಲಿ ವಿಶಿಷ್ಟ ಸಾಧನೆ ಮಾಡಿದ ಗಣೇಶ್ ಎಂ. ಹಾಗೂ ರಾಜ್ಯ ಮಟ್ಟದ ಹಿರಿಯ ವಾಲಿಬಾಲ್ ಆಟಗಾರರ ಸುರೇಶ್ ಚೆಳ್ಳಾರ್ ಅವರನ್ನು ಸನ್ಮಾನಿಸಲಾಯಿತು.

ಸಂಘದ ಅಧ್ಯಕ್ಷರಾದ ಗಂಗಾಧರ್ ಬಂಜನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಘದ ನಿಕಟ ಪೂರ್ವ ಅಧ್ಯಕ್ಷರಾದ ಮೋಹನ್ ಐ ಮೂಲ್ಯ ,ಗೌರವ ಅಧ್ಯಕ್ಷರಾದ ಗಂಗಾಧರ್ ಕೆ.,ಕಾರ್ಯದರ್ಶಿ ಗಣೇಶ್ ಕುಲಾಲ್,ಕೋಶಾಧಿಕಾರಿ ಹರೀಶ್ ಕುಲಾಲ್ ,ಕುಮಾರ್ ಕುಲಾಲ್, ಕೆ.ಏನ್ ಉಮೇಶ್ ಕುಲಾಲ್ ,ಗಣೇಶ್ ರಜತ ,ರಮೇಶ್ ಆರ್ ಕೆ,ದೇವದಾಸ್ ಟೈಲರ್ ,ಗಣೇಶ್ ಅಂಚನ್ ,ಮೋಹನ್ ಕಾವಿನಕಲ್ಲು,ಯೋಗೀಶ್ ಡಿ,ಮಾಧವ ಕುಲಾಲ್,ನಾರಾಯಣ್,ಮೂಲ್ಯ ,ಹರ್ಷಿತ್ ಕುಲಾಲ್ ,ಮಹಿಳಾ ಮಂಡಲದ ಅಧ್ಯಕ್ಷೆ ಶಕುಂತಲಾ ಬರ್ಕೆ,ಅಮಿತಾ ಯಶವಂತ್ ,ಲೋಲಾಕ್ಷಿ ಹರೀಶ್ ,ಮೀರಾ ಮೋಹನ್,ಭಾರತಿ ಗಂಗಾಧರ್,ಪ್ರಫುಲಾ ಸುಧಾಕರ್
ಮುಂತಾದವರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮದ ನಂತರ ಆಟಿ ತಿಂಗಳ ವಿವಿಧ ಖಾದ್ಯ ತಿನಸುಗಳನ್ನು, ಊಟವನ್ನು ಉಣ್ಣ ಬಡಿಸಲಾಯಿತು.
ದಿನೇಶ್ ಕುಲಾಲ್ ಕುಲಾಲ್ ವಂದಿಸಿದರು. ಕಾರ್ಯಕ್ರಮವನ್ನು
ಬಾನುಪ್ರಿಯಾ ಮತ್ತು ಅನುಶ್ರೀ ಹರ್ಷಿತ್ ಅಚ್ಚುಕಟ್ಟಾಗಿ ನಿರೂಪಿಸಿದರು.

Share This Article
Leave a Comment