ಶಕ್ತಿನಗರದ ರಾಜರಾಜೇಶ್ವರಿ ದೇವಸ್ಥಾನದ ಪರಿಸರದ ಡ್ರೈನೇಜ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಸ್ಥಳೀಯರ ಸಭೆ

Prakhara News
1 Min Read

ಮಂಗಳೂರು: ನಗರದ ಶಕ್ತಿನಗರ ಪ್ರಮುಖ ರಸ್ತೆಯಿಂದ ರಾಜರಾಜೇಶ್ವರಿ ದೇವಸ್ಥಾನ ನೀತಿನಗರ ಬಳಿಯ ಡ್ರೈನೇಜ್ ಸಮಸ್ಯೆ ಕುರಿತು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಅಧಿಕಾರಿಗಳ ಹಾಗೂ ಸ್ಥಳೀಯರ ಸಭೆ ನಡೆಯಿತು.

ಈ ವೇಳೆ ಮಾತನಾಡಿದ ಶಾಸಕರು ಇಲ್ಲಿನ ಜನರ ಬಹುಕಾಲದ ಬೇಡಿಕೆ ಇದಾಗಿದ್ದು, ಈಗಾಗಲೇ ಇಲ್ಲಿ ನೆಲದಡಿ ಪೈಪ್ ಲೈನ್ ಇದ್ದ ಕಾರಣ ಡ್ರೈನೇಜ್ ನಿರ್ಮಾಣಕ್ಕೆ ಅಡ್ಡಿಯಾಗಿತ್ತು. ಹಿಂದೆ ಈ ಬಗ್ಗೆ ಹಲವು ಸಭೆ ನಡೆಸಲಾಗಿದ್ದು ಸಮಸ್ಯೆಗೆ ಮುಕ್ತಿ ನೀಡಬೇಕೆಂಬುದು ಎಲ್ಲರ ಬೇಡಿಕೆಯಾಗಿದೆ. ಅದರಂತೆ ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯರಾದ ಕಿಶೋರ್ ಕೊಟ್ಟಾರಿ, ಪಾಲಿಕೆ ಉಪ ಆಯುಕ್ತರಾದ (ಅಭಿವೃದ್ಧಿ) ನರೇಶ್ ಶೆಣೈ, AEE ಶಿವಲಿಂಗಪ್ಪ, AE ಪ್ರಿಯಾಂಕ, ಕುಡ್ಸೆಂಪ್ ಅಧಿಕಾರಿಗಳಾದ ಜಯಪ್ರಕಾಶ್, ಸುರೇಶ್, ಶಿವರಾಮ್, ಸಂಪತ್, ವೆಂಕಟರಮಣ, ಸ್ಥಳೀಯರಾದ ಗಣೇಶ್ ಶೆಟ್ಟಿ, ಲಾಯ್ ಡಿಸೋಜಾ, ಬಾಲಕೃಷ್ಣ ಪೂಜಾರಿ, ವಿಠ್ಠಲ ಗೌಡ, ಮಣಿ ನೀತಿನಗರ ಮೊದಲಾದವರು ಉಪಸ್ಥಿತರಿದ್ದರು.

Share This Article
Leave a Comment