ಪುತ್ತೂರು : ಆರ್ಯಾಪು ಗ್ರಾಮದ ಸಂಪ್ಯ ಕಂಬಳತ್ತಡ್ಡ ನಾರಾಯಣ ಶೆಟ್ಟಿಯವರ ಪುತ್ರ ಸೀತಾರಾಮ ಶೆಟ್ಟಿ (47) ಆ. 23ರಂದು ಹೃದಯಾಘಾತದಿಂದ ನಿಧನರಾದರು.
ಸೀತಾರಾಮ ಶೆಟ್ಟಿ ರವರು ಸಂಪ್ಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದು, ಧಾರ್ಮಿಕ ಹಾಗೂ ಕಂಬಳ, ಜೇಸಿಐ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿದ್ದರು.ನೈತ್ತಾಡಿಯ ಕಲ್ಲಗುಡ್ಡೆ ಎಂಬಲ್ಲಿ ಬಾರ್ & ರೆಸ್ಟೋರೆಂಟ್ ನ್ನು ನಿರ್ವಹಣೆ ಮಾಡುತ್ತಿದ್ದ ಸೀತಾರಾಮ ಶೆಟ್ಟಿ ಎಂದಿನಂತೆ ಆ.23 ಬಾರ್ & ರೆಸ್ಟೋರೆಂಟ್ ಗೆ ಬಂದಿದ್ದ ವೇಳೆ ಹೃದಯಾಘಾತ ಸಂಭವಿಸಿದ್ದು, ಕೂಡಲೇ ಅವರನ್ನು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಲ್ಲಿ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ಮೃತರು ಪತ್ನಿ, ಮಕ್ಕಳು, ಸಹೋದರರು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ