Home ತಾಜಾ ಸುದ್ದಿ 70 ವರ್ಷ ದಾಟಿದ ವೃದ್ಧಾಪ್ಯದ ಕಾಯಿಲೆಗಳು ಆಯುಷ್ಮಾನ್ ಗೆ ಸೇರ್ಪಡೆ..! ಶೀಘ್ರದಲ್ಲೇ ಅನುಷ್ಠಾನ

70 ವರ್ಷ ದಾಟಿದ ವೃದ್ಧಾಪ್ಯದ ಕಾಯಿಲೆಗಳು ಆಯುಷ್ಮಾನ್ ಗೆ ಸೇರ್ಪಡೆ..! ಶೀಘ್ರದಲ್ಲೇ ಅನುಷ್ಠಾನ

0

70 ವರ್ಷ ದಾಟಿದ ಎಲ್ಲರನ್ನೂ ಆಯುಷ್ಮಾನ್ ವಿಮಾ ಯೋಜನೆ ವ್ಯಾಪ್ತಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಪ್ಯಾಕೇಜ್ ಗಳನ್ನು ಯೋಜನೆಗೆ ಸೇರಿಸುವ ನಿಟ್ಟಿನಲ್ಲಿ ಚರ್ಚೆ ನಡೆದಿದೆ.ಶೀಘ್ರದಲ್ಲೇ ಈ ಯೋಜನೆ ಜಾರಿಯಾಗುವ ಸಾಧ್ಯತೆಯಿದೆ.


ವೃದ್ಧರಲ್ಲಿ ಹೆಚ್ಚಾಗಿರುವ ಮರೆಗುಳಿತನ, ಬುದ್ಧಿಮಾಂದ್ಯ, ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆಗಳನ್ನು ವಿಮೆ ವ್ಯಾಪ್ತಿಗೆ ಸೇರಿಸುವ ಕುರಿತು ಕೇಂದ್ರ ಸರಕಾರದ ಮಟ್ಟದಲ್ಲಿ ಚಿಂತನೆಗಳು ನಡೆದಿದೆ.

ಈ ಸೇವೆಗಳು ಸೇರ್ಪಡೆಯಾದರೆ ಹಿರಿಯ ನಾಗರಿಕರಿಗೆ ಅನುಕೂಲವಾಗಲಿದೆ. ಎಲ್ಲಾ ಹಿರಿಯ ರನ್ನು ಯೋಜನೆ ವ್ಯಾಪ್ತಿಗೆ ತರುವುದರಿಂದ 4.5 ಕೋಟಿ ಕುಟುಂಬಗಳ ಸುಮಾರು 6 ಕೋಟಿ ನಾಗರಿಕರಿಗೆ ಪ್ರಯೋಜನವಾಗಲಿದೆ. ಈ ಮಾಸಾಂತ್ಯದಲ್ಲಿ ಅಧಿಕೃತವಾಗಿ ಈ ಯೋಜನೆ ಜಾರಿಯಾಗುವ ಸಾಧ್ಯತೆ ಇದೆ. ಆಯುಷ್ಮಾನ್ ಭಾರತ್ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (ಎಬಿ-ಪಿಎಂಜೆಎವೈ) ಅನುಷ್ಠಾನ ಸಂಸ್ಥೆಯಾದ ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ ಈ ಕುಳಿತು ಪರಿಶೀಲನೆ ನಡೆಸುತ್ತಿದೆ.

ಎಬಿ-ಪಿಎಂಜೆಎವೈ ವ್ಯಾಪ್ತಿಯಲ್ಲಿ 27 ವಿವಿಧ ವೈದ್ಯಕೀಯ ವಿಭಾಗಗಳಿಗೆ ಸೇರಿದ 1949 ವೈದ್ಯಕೀಯ ಸೇವೆಗಳು ಸಾರ್ವಜನಿಕರಿಗೆ ಲಭ್ಯವಾಗುತ್ತಿವೆ.

ಸೆಪ್ಟೆಂಬರ್ 1 ರವರೆಗೆ ದೇಶದಲ್ಲಿರುವ ಖಾಸಗಿ ವಲಯದ 12,696 ಸಹಿತ 29,648 ಆಸ್ಪತ್ರೆಗಳಲ್ಲಿ ಈ ಯೋಜನೆಯ ಲಾಭಗಳನ್ನು ಸಾರ್ವಜನಿಕರು ಪಡೆದುಕೊಳ್ಳುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಆಧಾರ್ ಕಾರ್ಡ್ ನಲ್ಲಿ 70 ವರ್ಷ ಮೀರಿದ ಹಿರಿಯ ನಾಗರಿಕರು ಈ ಯೋಜನೆಯ ಲಾಭ ಪಡೆಯಲು ಅರ್ಹರು.ಎಬಿ-ಪಿಎಂಜೆಎವೈ  ಆಪ್ ಮೂಲಕ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಈಗಾಗಲೇ ಆಯುಷ್ಮಾನ್ ಭಾರತ್ ಕಾರ್ಡ್ ಇದ್ದವರು ಮತ್ತೊಂದು ಕಾರ್ಡ್ ಬೇಕಿದ್ದರೆ ಹೊಸದಾಗಿ ನೋಂದಣಿ ಮಾಡಿಸಿಕೊಳ್ಳಬೇಕು ಜೊತೆಗೆ ಕೆವೈಸಿ ಪ್ರಕ್ರಿಯೆ ನಡೆಸಬೇಕು. 20 ವರ್ಷ ದಾಟಿದವರು ಮತ್ತು ಅವರ ಕುಟುಂಬದವರು ಈಗಾಗಲೇ ಯೋಜನೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ 5 ಲಕ್ಷ ರೂಪಾಯಿ ವರೆಗೆ ಹೆಚ್ಚುವರಿ ಆರೋಗ್ಯವಿಮೆ ಸಿಗಲಿದೆ ಎಂದು ತಿಳಿದುಬಂದಿದೆ.

LEAVE A REPLY

Please enter your comment!
Please enter your name here