ಉಡುಪಿ: ನಟ ಪ್ರಕಾಶ್ ರೈ ಭಾರತವನ್ನ ಪ್ರೀತಿಸಲ್ಲ. ಅವರಿಗೆ ಭಾರತದ ದುಡ್ಡು ಬೇಕು. ಆದ್ರೆ ಅವರ ಮನಸ್ಸು ಬೇರೆಲ್ಲೂ ಇರಬೇಕು. ಅವರ ಮನಸ್ಸು ಎಲ್ಲಿದೆಯೋ ಅಲ್ಲಿ ಹೋದ್ರೆ ಅವರು ಹೆಚ್ಚು ಖುಷಿಯಾಗಿ, ಆನಂದವಾಗಿರಬಹುದು. ಪ್ರಕಾಶ್ ರೈ ದುಃಖ ಪಟ್ಟುಕೊಂಡು ಭಾರತದಲ್ಲಿ ಇರಬೇಕಾದ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಚಂದ್ರಯಾನ 3 ಉಡಾವಣೆಗೆ ಬಗ್ಗೆ ಪ್ರಕಾಶ್ ರೈ ವ್ಯಂಗ್ಯವಾಡಿರುವ ಕುರಿತು ಉಡುಪಿಯಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅವರು, ಇದು ನಮ್ಮ ವಿಜ್ಞಾನಿಗಳಿಗೆ ಮಾಡುತ್ತಿರುವ ಅಪಮಾನ, ಭಾರತಕ್ಕೆ ಮಾಡುತ್ತಿರುವ ಅಪಮಾನ. ಇಸ್ರೋ ಸಾಧನೆಯನ್ನು ಪ್ರಪಂಚ ಇಂದು ಕೊಂಡಾಡುತ್ತಿದೆ ಶುಭ ಹಾರೈಕೆ ಮಾಡುತ್ತಿದೆ. ಆದರೆ ಪ್ರಕಾಶ್ ನಮ್ಮ ದೇಶದಲ್ಲಿ ಇದ್ದು ನಮ್ಮ ಗಾಳಿ ನೀರು ಸೇವಿಸಿ ಅವಹೇಳನ, ಅಪಹಾಸ್ಯ ಮಾಡುತ್ತಾರೆ. ಅವರು ಎಲ್ಲಿದ್ದಾರೆ ಅಂತ ಅವರಿಗೆ ಅವರೇ ಪ್ರಶ್ನೆ ಮಾಡಬೇಕು ಎಂದು ನಟ ಪ್ರಕಾಶ್ ರಾಜ್ ವಿರುದ್ಧ ಆಕ್ರೋಶ ಹೊರ ಹಾಕಿದರು.