ಮಂಗಳೂರು: ಮುಂಜಾನೆ ಸುರಿದ ಭಾರೀ ಗುಡುಗು ಮಳೆ – ಅತ್ತಾವರದಲ್ಲಿ ತಡೆಗೋಡೆ ಕುಸಿದು ಹಲವು ಕಾರುಗಳು ಜಖಂ 

Prakhara News
1 Min Read

ಮಂಗಳೂರು : ಬಿಸಿಲ ಬೇಗೆಯಿಂದ ತತ್ತರಿಸಿದ ಮಂಗಳೂರಿನ ಜನರಿಗೆ ಇಂದು ಮುಂಜಾನೆ ವರುಣ ದೇವ ಕೃಪೆ ತೋರಿಸಿದ್ದಾನೆ,. ಮುಂಜಾನೆ ವೇಳೆ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸುರಿದಿದೆ.

ಕೊನೆಗೂ ಬಿಸಿಲಿನಿಂದ ಕಂಗೆಟ್ಟಿದ್ದ ಮಂಗಳೂರಿನ ಜನರಿಗೆ ಮಳೆಯಿಂದ ನಿಟ್ಟುಸಿರು ಬಿಡುವಂತಾಗಿದೆ. ಮುಂಜಾನೆ ವೇಳೆ ಭಾರೀ ಮಳೆ ಸುರಿದಿದ್ದು, ನಗರವನ್ನು ತಂಪಾಗಿಸಿದೆ. ಇನ್ನೊಂದೆಡೆ ನಗರದ ಅತ್ತಾವರ ಅಯ್ಯಪ್ಪ ಮಂದಿರದ ಬಳಿ ತಡೆಗೋಡೆ ಕುಸಿದು ಕೆಲ ಕಾರುಗಳು ಹಾನಿಗೊಳಗಾಗಿರುವ ಘಟನೆ ನಡೆದಿದೆ.

ತಡೆಗೊಡೆ ಸಮೀಪ ಕಾರುಗಳನ್ನು ಪಾರ್ಕ್ ಮಾಡಲಾಗಿದ್ದು, ಇದರ ಮೇಲೆ ತಡೆಗೋಡೆ ಕುಸಿದು ಬಿದ್ದಿದ್ದು 5 ಕಾರುಗಳು ಜಖಂಗೊಂಡಿದೆ. ಯಾರೊಬ್ಬರಿಗೂ ಗಾಯಗೊಂಡ ಬಗ್ಗೆ ವರದಿಯಾಗಿಲ್ಲ.

ಚಮ್ಮಾರ ಗಲ್ಲಿಯ ಬಸವನಗುಡಿಯ ಅಶ್ವತ್ಥ ಕಟ್ಟೆಯಲ್ಲಿದ್ದ ಬೃಹತ್ ಅಶ್ವತ್ಥ ಮರದ ಗೆಲ್ಲು ಮುರಿದು ಬಿದ್ದ ಪರಿಣಾಮ ಎರಡು ಮನೆಗಳು ಹಾಗೂ ಮೂರು ದ್ವಿಚಕ್ರ ವಾಹನಗಳಿಗೆ ಹಾನಿಯಾಗಿದೆ. ಬಿದ್ದ ಮರದ ಗೆಲ್ಲಿನ ಅಡಿಯಲ್ಲಿ ಸಿಲುಕಿದ್ದ ಎರಡು ದ್ವಿಚಕ್ರ ವಾಹನಗಳು ಸಂಪೂರ್ಣ ನಜ್ಜುಗುಜ್ಜಾಗಿವೆ. ಇದೇ ವೇಳೆ ಮರದ ಗೆಲ್ಲು ಬಿದ್ದ ಪರಿಣಾಮ ಎರಡು ಮನೆಗಳಿಗೆ ಭಾಗಶಃ ಹಾನಿಯಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

Share This Article
Leave a Comment