Home ಪ್ರಖರ ವಿಶೇಷ ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಇರಲಿ: ಶಿವಕುಮಾರ್ ಹಿರೇಮಠ

ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಇರಲಿ: ಶಿವಕುಮಾರ್ ಹಿರೇಮಠ

0
Let the next generation care about the environment: Shivakumar Hiremath

ಸಾವಳಗಿ: ಮಾನವನ ದುರಾಸೆಯಿಂದ ಪರಿಸರ ಹಾಳಾಗುತ್ತಿದ್ದು, ಇದು ಮಾನವನಿಂದಲೇ ಸರಿಯಾಗಬೇಕಿದೆ. ಮುಂದಿನ ಪೀಳಿಗೆಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸದಿದ್ದರೆ ಮುಂದೆ ಹೆಚ್ಚಿನ ಅಪಾಯ ಎದುರಾಗಲಿದೆ ಎಂದು ಕೃಷಿ ಅಧಿಕಾರಿ ಶಿವಕುಮಾರ್ ಹಿರೇಮಠ ಹೇಳಿದರು.


ಜಮಖಂಡಿ ತಾಲೂಕಿನ ಸಾವಳಗಿ ಗ್ರಾಮದ ರೈತ ಸಂಪರ್ಕ ಕೇಂದ್ರದ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸಸಿಯನ್ನು ನೆಟ್ಟು. ನೀರು ಹಾಕುವುದರ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.

ನಂತರ ಮಾತನಾಡಿದ ಕೃಷಿ ವಿಜ್ಞಾನ ಕೇಂದ್ರ ಬಾಗಲಕೋಟೆ ವಿಜ್ಞಾನಿಗಳಾದ ಡಾ|| ವೆಂಕಣ್ಣ ಬಳಗಾನೂರ ಮಾತನಾಡಿ ಪರಿಸರ, ಪಕೃತಿ ನಮಗೆ ಎಲ್ಲವನ್ನೂ ನೀಡುತ್ತದೆ. ಅಗಣಿತವಾದ ಅಮೂಲ್ಯ ಕೊಡುಗೆಗಳನ್ನು ನೀಡುತ್ತದೆ. ಪ್ರತಿಯೊಂದು ಜೀವ ಸಂಕುಲಕ್ಕೆ ಅಗತ್ಯ, ಅನಿವಾರ್ಯ. ಆದರೆ ನಾವಿಂದು ಪರಿಸರಕ್ಕಾಗಿ ಏನನ್ನು ಕೊಟ್ಟಿದ್ದೇವೆ, ಕೊಡುತ್ತಿದೇವೆ ಎಂಬುದನ್ನು ಪ್ರತಿಯೊಬ್ಬ ಮಾನವನು ತನಗೆ ತಾನೇ ಹಾಕಿಕೊಳ್ಳಬೇಕು ಪ್ರಶ್ನೆಯಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಸಹಾಯಕ ತಾಂತ್ರಿಕ ವ್ಯವಸ್ಥಾಪಕ ನಜೀರ ಜಮಖಂಡಿ, ಸಿಬ್ಬಂದಿಗಳಾದ ಅಮರ ಅಂಬಿ, ಜ್ಞಾನೇಶ್ವರ ಹರಪಾಳೆ, ರಾಹುಲ್ ತೇಲಿ, ಮಾನೋಜಿ ಸರ್, ಪುಲಕೇಶಿ ಜಮಖಂಡಿ, ಮಹೇಶ್ ಹರಪಾಳೆ, ದುಂಡಪ್ಪ ಕಂಕಣವಾಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here