
ನಾವು ಅಂಗಡಿಗೆ ಬಟ್ಟೆ ಕೊಳ್ಳಲು ಹೋದಾಗ ಬಟ್ಟೆಗಳ ಮೇಲೆ ಏನೆನೋ ಟ್ಯಾಗ್‌ಗಳು ಕಂಡುಬರುತ್ತವೆ.
ಬಟ್ಟೆಗಳ ಮೇಲಿರುವ S, M, XL XXL ಪದಗಳ ಬಗ್ಗೆ ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. L ಅಂದರೆ ದೊಡ್ಡ ಸೈಜ್ ಮತ್ತು S ಅಂದರೆ ಚಿಕ್ಕ ಸೈಜ್ ಮತ್ತು M ಅಂದರೆ ಮಧ್ಯಮ ಗಾತ್ರ (ಮೀಡಿಯಂ ಸೈಜ್) ಅಂತ ತಿಳಿದಿದ್ದೇವೆ. ಆದರೆ XS, XL, XXL ಒಟ್ಟಿನಲ್ಲಿ X ಎಂದರೆ ಏನು ಎಂದು ನಿಮಗೆ ತಿಳಿದಿದ್ಯಾ? ಆದರೆ ಇದೇ ಪದಗಳಂತೆ X ಅಕ್ಷರದ ಅರ್ಥ ಗೊತ್ತಾ?



ಹಾಗಾದರೆ ಈ ಇಂಗ್ಲಿಷ್ ಪದದ ವಿಶೇಷ ಅಕ್ಷರದ ಅರ್ಥವೇನು ಎಂದು ನಾವಿಂದು ತಿಳಿಯೋಣ.

ವಾಸ್ತವವಾಗಿ, X ಎಂದರೆ ಎಕ್ಸ್‌ಟ್ರಾ ಮತ್ತು L ಎಂದರೆ ದೊಡ್ಡದಾದ ಬಟ್ಟೆ ಗಾತ್ರಗಳು. ಆದ್ದರಿಂದ, XL ಎಂದರೆ, ಎಕ್ಸ್‌ಟ್ರಾ ಲಾರ್ಜ್. XXL ಎಂದರೆ ಎಕ್ಸ್‌ಟ್ರಾ ಎಕ್ಸ್‌ಟ್ರಾ ಲಾರ್ಜ್. ಅಂದರೆ, ಈ X ಅನ್ನು ಗಾತ್ರದ ಶ್ರೇಣಿಯನ್ನು ಸೂಚಿಸಲು ಬಳಸಲಾಗುತ್ತದೆ.
X ಎಂದರೆ ದೊಡ್ಡದು. XL ಎಂದರೆ ಎಕ್ಸ್‌ಟ್ರಾ ಲಾರ್ಜ್. XL ಗಾತ್ರದ ಶರ್ಟ್ 42 ಇಂಚುಗಳು ಮತ್ತು 44 ಇಂಚುಗಳ ನಡುವೆ ಅಳತೆ ಇರುತ್ತದೆ.
ಮತ್ತು XXL ಎಂದರೆ ಎಕ್ಸ್‌ಟ್ರಾ ಎಕ್ಸ್‌ಟ್ರಾ ಲಾರ್ಜ್. XXL ಶರ್ಟ್ಗಳು ಅಥವಾ ಉಡುಪುಗಳು ಸಾಮಾನ್ಯವಾಗಿ 44 ಇಂಚುಗಳು ಮತ್ತು 46 ಇಂಚುಗಳ ನಡುವೆ ಗಾತ್ರದಲ್ಲಿರುತ್ತವೆ.
ಮತ್ತೆ XS ಎಂದರೆ ಹೆಚ್ಚು ಚಿಕ್ಕದು ಎಂದರ್ಥ. XS ಎಂದರೆ ಎಕ್ಸ್ಟ್ರಾ ಸ್ಮಾಲ್ ಮತ್ತು M ಎಂದರೆ ಮಧ್ಯಮ ಗಾತ್ರದ್ದು. ಇವುಗಳು ವಾಸ್ತವವಾಗಿ ಪುರುಷರು ಮತ್ತು ಮಹಿಳೆಯರಿಗೆ ಸರಿಯಾದ ರೀತಿಯ ಉಡುಪುಗಳನ್ನು ತೆಗೆದುಕೊಳ್ಳಲು ಸಹಾಕಾರಿ ಆಗಿದೆ.