ಜ.24 ಮತ್ತು 25 ರಂದು ಟಿಎನ್ ಪಿಎಲ್ – ಸೀಸನ್ 1 : ಉರ್ವಾ ಇಂಡೋರ್ ಸ್ಟೇಡಿಯಂನಲ್ಲಿ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟ

Prakhara News
2 Min Read
Oplus_2

ಮಂಗಳೂರು : ತುಳುನಾಡು ನಮ್ಮ ಪ್ರೀಮಿಯರ್ ಲೀಗ್ (TNPL) – ಸೀಸನ್ 1 ಓಪನ್ ರಾಜ್ಯ ಆಮಂತ್ರಣ ಬ್ಯಾಡ್ಮಿಂಟನ್ ಲೀಗ್ ಆಗಿದ್ದು, ಜನವರಿ 24 ಮತ್ತು 25 ರಂದು ಉರ್ವಾ ಇಂಡೋರ್ ಬ್ಯಾಡ್ಮಿಂಟನ್ ಸ್ಟೇಡಿಯಂ ಮಂಗಳೂರಿನಲ್ಲಿ ಆಯೋಜಿಸಲಾಗುತ್ತಿದೆ,ಈ ಪ್ರಮುಖ ಲೀಗ್ ನಲ್ಲಿ ಭಾರತದ ವಿವಿಧ ಭಾಗಗಳಿಂದ 10 ಫ್ರಾಂಚೈಸ್ ತಂಡಗಳು ಭಾಗವಹಿಸುತ್ತಿದ್ದು 7 ಸ್ವರ್ಧಾತ್ಮಕ ವರ್ಗಗಳಲ್ಲಿ ಪಂದ್ಯಗಳು ನಡೆಯಲಿವೆ, ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳನ್ನು ಹಾಗೂ ಭಾರತವನ್ನು ಪ್ರತಿನಿಧಿಸಿದ ವ್ರತ್ತಿಪರ ಬ್ಯಾಡ್ಮಿಂಟನ್ ಆಟಗಾರರು ಈ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು TNPL ನ ಸ್ಥಾಪಕ ಹಾಗೂ ಮಾಲೀಕರಾದ ಡಿ.ಎಸ್,ಅಬ್ದುಲ್ ರಹಿಮಾನ್ ಹೇಳಿದರು.

ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು TNPL ಲೀಗ್‌ಗೆ 250ಕ್ಕೂ ಹೆಚ್ಚು ಆಟಗಾರರಿಂದ ನೊಂದಾಣಿಗಳು ಲಭಿಸಿದ್ದು. ಜನವರಿ 11 ರಂದು ಅಧಿಕ್ರತ ಪ್ಲೇಯರ್ ಔಕ್ಷನ್ ಅಯೋಜಿಸಲಾಯಿತು, ಈ ಪ್ರಕ್ರಿಯೆಯ ನಂತರ 180 ಆಟಗಾರರನ್ನು ಆಯ್ಕೆ ಮಾಡಲಾಗಿದ್ದು ,ಅವರು 10 ಫ್ರಾಂಚೈಸ್ ತಂಡಗಳಲ್ಲಿ ಭಾಗವಹಿಸುತ್ತಿದ್ದಾರೆ ಎಂದರು.

ನಂತರ ಮಾತನಾಡಿದ ಸಹ ಸ್ಥಾಪಕ ಹಾಗೂ ಸಹ ಮಾಲೀಕ ಪುನೀತ್ .ಪಿ.ಮಾತನಾಡಿ ದಕ್ಷಿಣ ಭಾರತದಲ್ಲಿ ಮೊದಲ ಬಾರಿಗೆ, ಲೀಗ್‌ನ್ನು ಯೋನೆಕ್ಸ್ AS-50 ಫೆದರ್ ಶಟ್ಲ್ಸ್ ಬಳಸಿ ಅಂತರರಾಷ್ಟ್ರೀಯ ಮಟ್ಟದ ನಿಯಾಮವಳಿಗಳೊಂದಿಗೆ ನಡೆಸಲಾಗುತ್ತದೆ,ಎಲ್ಲಾ ಪಂದ್ಯಗಳು ಲೈವ್ ಟೆಲಿಕಾಸ್ಟ್ ಆಗಲಿದ್ದು ಆಟಗಾರರು ಮತ್ತು ಫ್ರಾಂಚೈಸ್ ಗಳಿಗೆ ವ್ಯಾಪಕ ಪ್ರಚಾರ ಸಿಗಲಿದೆ. ಈ ಲೀಗ್‌ನಲ್ಲಿ ಕೇವಲ ವ್ರತ್ತಿಪರ ಆಟಗಾರರು ಮಾತ್ರ ಭಾಗವಹಿಸುತ್ತಾರೆ ಅವರು ಕರ್ನಾಟಕ ,ವಿವಿಧ ರಾಜ್ಯಗಳು ಹಾಗೂ ಭಾರತವನ್ನು ಪ್ರತಿನಿಧಿಸಿದ್ದಾರೆ. ವಿಜೇತ ತಂಡಕ್ಕೆ 4 ಲಕ್ಷ ರೂ,ಹಾಗೂ ರನ್ನರ್ಸ್ ಅಪ್ ತಂಡಕ್ಕೆ 2 ಲಕ್ಷ ಬಹುಮಾನ ಮೊತ್ತ ನಿಗದಿಪಡಿಸಲಾಗಿದೆ.

TNPL ಒಂದು ಲಾಭೋದ್ದೇಶಿತ ಕಾರ್ಯಕ್ರಮವಲ್ಲ ಇದು ಸಂಪೂರ್ಣವಾಗಿ ಬ್ಯಾಡ್ಮಿಂಟನ್ ಆಟಗಾರರು ಮತ್ತು ಅಭಿಮಾನಿಗಳ ಅಭಿವೃದ್ಧಿಗೆ ಸಮರ್ಪಿತವಾದ ಲೀಗ್ ಆಗಿದೆ, ಸ್ಥಳೀಯ ಮಂಗಳೂರು ಮತ್ತು ಕರಾವಳಿ ಕರ್ನಾಟಕದ ಆಟಗಾರರಿಗೆ ವ್ರತ್ತಿಪರ ಲೀಗ್ ವೇದಿಕೆ ಒದಗಿಸುವುದು ಅವರನ್ನು ಉತ್ತೇಜಿಸುವುದು ಮತ್ತು ಬೆಂಬಲಿಸುವುದೇ ಇದರ ಪ್ರಮುಖ ಉದ್ದೇಶವಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಸಂತೋಷ್‌ ಕುಮಾರ್ ಶೆಟ್ಟಿ – EC ಸದಸ್ಯ, ಕರ್ನಾಟಕ ಬ್ಯಾಡ್ಮಿಂಟನ್ ಅಸೋಸಿಯೇಷನ್ & ಅಧ್ಯಕ್ಷ ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್,
ಸೂಪ್ರಿತ್ ಅಲ್ವಾ – ಅಧ್ಯಕ್ಷ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ (ಮಂಗಳೂರು-ಮಣಿಪಾಲ್ ಸೆಂಟರ್) & ಕಾರ್ಯದರ್ಶಿ, ದಕ್ಷಿಣ ಕನ್ನಡ ಬ್ಯಾಡ್ಮಿಂಟನ್ ಅಸೋಸಿಯೇಷನ್, ಧೀಕ್ಷಿತ್.ಕೆ – ಪ್ರೋಪ್ರೈಟರ್, ಸುಜಾತಾ ಕಾಂಸ್ಟ್ರಕ್ಷನ್ಸ್, ಮಂಗಳೂರು ಇವರು ಉಪಸ್ಥಿತರಿದ್ದರು.

Share This Article
Leave a Comment