ಮಂಗಳೂರು : ಹಲವು ವಿಶೇಷತೆಗಳೊಂದಿಗೆ ಕರಾವಳಿ ಉತ್ಸವ ಜನಮನ್ನಣೆಗಳಿಸುತ್ತಿರುವ ಹೊತ್ತಿನಲ್ಲಿ ಜಿಲ್ಲಾಡಳಿತದ ನೇತ್ರತ್ವದಲ್ಲಿ ಈ ಬಾರಿ ತುಳು,ಕನ್ನಡ, ಕೊಂಕಣಿ ಹಾಗೂ ಬ್ಯಾರಿ ಭಾಷೆಗಳ ಕರಾವಳಿ ಚಲನಚಿತ್ರ ಉತ್ಸವವು ಜ.19 ರಿಂದ 21 ರವರೆಗೆ ನಡೆಯಲಿದ್ದು ಇದರ ಭಾಗವಾಗಿ ಕರಾವಳಿ ಫಿಲ್ಮ್ ಫೆಸ್ಟಿವಲ್ 2025ರ ಉದ್ಘಾಟನಾ ಕಾರ್ಯಕ್ರಮವು ಬಿಜೈನ ಭಾರತ್ ಸಿನಿಮಾಸ್ ನಲ್ಲಿ ನಿನ್ನೆ ನಡೆಯಿತು.


ಭಾರತ್ ಸಿನೆಮಾಸ್ ಒಂದರಲ್ಲಿ ಒಟ್ಟು 18 ಚಲನಚಿತ್ರಗಳು ಪ್ರದರ್ಶನಗೊಳ್ಳಲಿದ್ದು, ತುಳು ಭಾಷೆಯ ಬೆಳವಣಿಗೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಬಾರಿ 11 ತುಳು ಚಲನಚಿತ್ರಗಳ ಪ್ರದರ್ಶನ ನಡೆಯಲಿದೆ.

ಚಲನಚಿತ್ರೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಚಿತ್ರ ನಟ ರಾಜ್ ಬಿ.ಶೆಟ್ಟಿ ಮಾತನಾಡಿ,ಒಂದು ಸಿನೆಮಾವನ್ನು ನೋಡುವಂತಹ ಅಭಿರುಚಿಯನ್ನು ಎಲ್ಲಿ ಬೆಳೆಸುತ್ತೇವೆಯೋ ಅಥವಾ ಪೋಷಿಸುತ್ತೇವೆಯೋ ಅಲ್ಲಿ ಉತ್ತಮವಾದ ಕಥೆ ಹುಟ್ಟುವ ಅವಕಾಶ ಹೆಚ್ಚಿದೆ.ಫಿಲ್ಮ್ ಫೆಸ್ಟ್ ನಿಂದ ಬೇರೆ ಬೇರೆ ರೀತಿಯ ಸಿನೆಮಾವನ್ನು ನೋಡುವುದರಿಂದ ಉತ್ತಮವಾದ ಕಥೆ ಹುಟ್ಟುತ್ತದೆ. ಸರಕಾರದಿಂದ ಇದು ಒಳ್ಳೆಯ ಪ್ರಯತ್ನವಾಗಿದೆ.ಫಿಲ್ಮ್ ಫೆಸ್ಟ್ ಗೆ ನನ್ನಿಂದಾಗುವ ಸಹಕಾರವನ್ನು ನಾನು ಮಾಡುವೆ ಎಂದು ತಿಳಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಸ್ಮಾರ್ಟ್ ಸಿಟಿ ಎಂಡಿ ಡಾ.ಜಿ.ಸಂತೋಷ್ ಕುಮಾರ್ ಕೆಎಎಸ್ , ಹಿರಿಯ ನಿರ್ದೇಶಕ ರಿಚರ್ಡ್ ಕ್ಯಾಸ್ಟಲಿನೋ,ರಂಗಕರ್ಮಿ ವಿಜಯಕುಮಾರ್ ಕೊಡಿಯಾಲ್ ಬೈಲ್,ನಿರ್ಮಾಪಕರಾದ ಪ್ರಕಾಶ್ ಪಾಂಡೇಶ್ವರ್, ರವಿ ರೈ ಕಳಸ, ಶ್ರೀನಿವಾಸ್, ಪ್ರೇಮ್ ಶೆಟ್ಟಿ ಸುರತ್ಕಲ್, ನಿರ್ಮಾಪಕ ಸಂಘದ ಅಧ್ಯಕ್ಷ ಆರ್. ಧನರಾಜ್, ಬಿಗ್ ಸಿನೆಮಾಸ್ ನ ಬಾಲಕೃಷ್ಣ ಶೆಟ್ಟಿ, ಯತೀಶ್ ಬೈಕಂಪಾಡಿ, ಸಚಿನ್ ಉಪ್ಪಿನಂಗಡಿ, ಜಗನ್ನಾಥ ಶೆಟ್ಟಿ.ಬಾಳ, ನಟ ಸಂದೀಪ್ ಮಲಾನಿ, ಮುಂತಾದವರು ಉಪಸ್ಥಿತರಿದ್ದರು


