ಮಂಗಳೂರು : ಪುತ್ತೂರು ಬ್ರದರ್ಸ್ ಎಂಟರ್ಟೇನ್ಮೆಂಟ್ ರವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಹೊಸ ಸಸ್ಪೆನ್ಸ್ ಥ್ರಿಲ್ಲರ್ ಕನ್ನಡ ಚಲನಚಿತ್ರ ಮಂಗಮಾಯ ಇದೇ ಮೇ 8 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ, ಈಗಾಗಲೇ ಚಿತ್ರದ ಒಂದು ಹಾಡು ಹಾಗೂ ಟೀಸರ್ ರಿಲೀಸ್ ಆಗಿದ್ದು ಪ್ರೇಕ್ಷಕರು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಚಿತ್ರದ ನಿರ್ದೇಶಕ ಪ್ರಸಾದ್ ಕೆ.ಎಸ್.ಅವರು ಹೇಳಿದರು.


ನಗರದ ಪ್ರೆಸ್ ಕ್ಲಬ್ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಣ್ಣ ವೆಚ್ಚದ, ನೈಜ ಘಟನೆಯನ್ನು ಆಧಾರಿತ, ಒಂದೇ ದಿನ ನಡೆಯುವ ಕಥಾಹಂದರವಾಗಿದ್ದು. ಯಾವುದೇ ಕಲಾವಿದರಿಗೆ ಮೇಕಪ್ ಇಲ್ಲದೆ, ಹೀರೋಯಿನ್ ಇಲ್ಲದೆ ಒಂದೇ ಲೊಕೇಶನ್ ನಲ್ಲಿ 43 ದಿನಗಳ ಕಾಲ ಒಂದೇ ಶೆಡ್ಯೂಲ್ ನಲ್ಲಿ ಚಿತ್ರೀಕರಿಸಲಾದ ಸಿನೆಮಾವಾಗಿದೆ ಎಂದರು.

ನಿರ್ಮಾಣ ಸಂಸ್ಥೆ ಮತ್ತು ನಿರ್ದೇಶಕರು ಕರಾವಳಿ ಭಾಗದವರಾಗಿರುವುರಿಂದ ಕರಾವಳಿಯ ಹಲವಾರು ಕಲಾವಿದರಿಗೆ ,ತಂತ್ರಜ್ಞರಿಗೆ ಅವಕಾಶ ನೀಡಲಾಗಿದೆ ಅಲ್ಲದೆ ಚಿತ್ರಕ್ಕೆ ಕರಾವಳಿ ಕನ್ನಡದ ಭಾಷಾ ಸೊಗಡನ್ನು ಬಳಸಲಾಗಿದ್ದು ಪ್ರೇಕ್ಷಕರಿಗೆ ಇದು ಇಷ್ಟವಾಗಲಿದೆ ಎಂದರು

ಚಿತ್ರದಲ್ಲಿ ರಂಜನ್ ಶೆಟ್ಟಿ, ರಾಧೇಶ್ ಶೆಣೈ, ಪ್ರಕಾಶ್ ಶೆಣೈ, ಪ್ರಸನ್ನ ಪುತ್ತೂರು, ಮಹಮ್ಮದ್ ಹನೀಫ್, ಅಕ್ಷತ್ ಅಮಿನ್ ,ಚಂದನ್ ಕುಮಾರ್, ಬಿ.ಅರುಣ್ ಶೆಣೈ, ಚೇತನ್ ಪುತ್ತೂರು, ವಿಜಯಲಕ್ಷ್ಮಿ ಎಮ್, ಮಂಜುನಾಥ್ ಎಂ.ಎನ್, ಸಿದ್ದು ಪ್ರಸನ್ನ, ನಿತೀಶ್ ಅಗರ್ವಾಲ್ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಚಿತ್ರದ ಕಥಾ ಸಾರಾಂಶ :-
ಕೋವಿಡ್ ಮೊದಲನೇ ಅಲೆಯ ಸಮಯದಲ್ಲಿ ಉದ್ಯೋಗ ಅರಸಿ ಬೇಸತ್ತ ನಾಯಕ, ಕೊನೆಗೆ ಲಾಡ್ಜ್ ಒಂದರಲ್ಲಿ ರೂಮ್ ಬಾಯ್ ಆಗಿ ಕೆಲಸ ನಿರ್ವಹಿಸುತ್ತಾನೆ. ಆ ದಿನ ಲಾಡ್ಜ್ ನಲ್ಲಿ ನಡೆದ ಘಟನೆಯಲ್ಲಿ ನಾಯಕ, ಪಿಎ ಕೈಯಲ್ಲಿ ವಿನಾಕಾರಣ ಹೊಡೆಸಿಕೊಂಡು ತನ್ನ ರಿಬ್ ಮುರಿದುಕೊಳ್ಳಬೇಕಾಗುತ್ತದೆ. ಸರ್ಜರಿಗಾಗಿ ಪಿಎ ಬಳಿ ಹಣ ಕೇಳಿದ್ದಕ್ಕೆ ಕೊಡದಾಗ, ನಾಯಕ ಅಲ್ಲಿಂದ ಕೆಲಸ ತೊರೆಯುತ್ತಾನೆ ಆದರೆ ಸೇಡು ತೀರಿಸಿಕೊಳ್ಳುವ ಇರಾದೆ ಇರುತ್ತದೆ.
ಕೋವಿಡ್ ಎರಡನೇ ಅಲೆಯ ಸಮಯದಲ್ಲಿ. ಎಂದಿನಂತೆ ತನ್ನ ಎಮ್ಎಲ್ಎ ಗೆ ಬರಬೇಕಾದ ಬ್ಲಾಕ್ ಮನಿಯನ್ನು ತರಲು ಪಿಎ ಲಾಡ್ಜ್ ಗೆ ಅಂದೂ ಬರುತ್ತಾನೆ. ಆದರೆ ಹಣದ ಬ್ಯಾಗ್ ನಾಪತ್ತೆಯಾಗಿರುತ್ತದೆ. ‘ಯಾರು ಕದ್ದಿರುವವರು ಎಂಬುದನ್ನು ತನಿಖೆ ಮುಖಾಂತರ ಅರಿತಾಗ ಇದು ನಾಯಕನ ಕೆಲಸ ಎಂದು ತಿಳಿಯುತ್ತದೆ.
ನಾಯಕನ ಅದ್ಭುತ ಪ್ಲಾನ್ ಹೊರತಾಗಿಯೂ. ಲಿಫ್ಟ್ನ ತಾಂತ್ರಿಕ ದೋಷದಿಂದಾಗಿ ಹಣದೊಂದಿಗೆ ಪರಾರಿಯಾಗುವಾಗ ನಾಯಕ ಸಿಕ್ಕಿ ಹಾಕಿಕೊಳ್ಳಬೇಕಾಗುತ್ತದೆ. ಇದನ್ನರಿತ ಪಿಎ ಮತ್ತವನ ತಂಡ ಲಾಡ್ಜ್ನಲ್ಲಿಯೇ ಅಡಗಿರುವ ಏಕಾಂಗಿ ನಾಯಕನನ್ನು ಮತ್ತು ಹಣದ ಬ್ಯಾಗ್ ಅನ್ನು ಹಿಡಿಯುವಲ್ಲಿ ಸಫಲರಾಗುತ್ತಾರೆಯೇ? ಇಲ್ಲ ನಾಯಕ ಪರಾರಿಯಾಗಿ ಪ್ರತೀಕಾರ ತೀರಿಸಿಕೊಳ್ಳುತ್ತಾನೆಯೇ ಎಂಬುದೇ ಪ್ರಶ್ನೆ.?
ಪತ್ರಿಕಾಗೋಷ್ಠಿಯಲ್ಲಿ ರಾಧೇಶ್ ಶೆಣೈ ಉಡುಪಿ,ಪ್ರಸನ್ನ ಪುತ್ತೂರು, ಅಕ್ಷತ್ ಅಮೀನ್ ಉಪಸ್ಥಿತರಿದ್ದರು.


