ಮಂಗಳೂರು: ಕಾವೂರಿನ ಪೆಟ್ರೋಲ್ ಪಂಪ್‌ವೊಂದರಲ್ಲಿ ಏಣಿ ವಿದ್ಯುತ್ ತಂತಿಗೆ ತಗಲಿದ ಪರಿಣಾಮ ಗಂಭೀರ ಗಾಯಗೊಂಡಿದ್ದ ಉತ್ತರ ಪ್ರದೇಶದ ವಾರಾಣಾಸಿ ಮೂಲದ ಪಂಪ್ ಸಿಬಂದಿ ಸಂದೀಪ್ ಕುಮಾರ್ ವರ್ಮ (45) ಅವರು ಮೃತಪಟ್ಟಿದ್ದಾರೆ.



ಪಂಪ್‌ನಲ್ಲಿ ಎಲೆಕ್ಟ್ರಿಶಿಯನ್ ಆಗಿ ಕೆಲಸ ಮಾಡುತ್ತಿದ್ದ ಅವರು ರವಿವಾರ ಕೆಲಸ ನಿಮಿತ್ತ ಏಣಿ ಕೊಂಡೊಯ್ದು ವಿದ್ಯುತ್ ಕಂಬಕ್ಕೆ ಒರಗಿಸಿಟ್ಟಿದ್ದರು.


ಈ ಸಂದರ್ಭ ವಿದ್ಯುತ್ ಪ್ರವಹಿಸಿ ಸಂದೀಪ್ ಕುಮಾರ್ ಕೆಳಗೆ ಬಿದ್ದಿದ್ದಾರೆ. ಗಂಭೀರ ಗಾಯಗೊಂಡ ಅವರನ್ನು ಕೂಡಲೇ ನಗರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದರಾದರೂ, ಆ ವೇಳೆಗಾಗಲೇ ಮೃತಪಟ್ಟಿದ್ದಾರೆ. ಅವರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾವೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.