Home ತಾಜಾ ಸುದ್ದಿ ಇನ್ಮುಂದೆ “X” ನಲ್ಲಿ ನಂಬರ್ ಇಲ್ಲದೇ ಕಾಲ್, ವಿಡಿಯೋ ಕಾಲ್ ಮಾಡಬಹುದು

ಇನ್ಮುಂದೆ “X” ನಲ್ಲಿ ನಂಬರ್ ಇಲ್ಲದೇ ಕಾಲ್, ವಿಡಿಯೋ ಕಾಲ್ ಮಾಡಬಹುದು

0

ಸಾಮಾಜಿಕ ಜಾಲತಾಣ ಟ್ಟಿಟ್ಟರ್ ಈಗ X ಎಂಬ ಹೆಸರಿನೊಂದಿಗೆ ಬದಲಾಗಿದೆ. ಹೆಸರು ಬದಲಾದಂತೆ ಬಳಕೆದಾರರಿಗೆ ಅದರ ಮಾಲೀಕ ಎಲಾನ್ ಮಸ್ಕ್ ಅನೇಕ ಸೌಲಭ್ಯಗಳನ್ನು ನೀಡುತ್ತಿದ್ದಾರೆ. ಈ ಸಲ ಟ್ವೀಟ್ ಮೂಲಕ ಅವರು ಮತ್ತೊಂದು ಫೀಚರ್‌ಅನ್ನು ಪರಿಚಯಿಸಿದ್ದಾರೆ. ಇನ್ಮೇಲೆ “X” ನಲ್ಲಿ ಯಾವುದೇ ಸಂಪರ್ಕ ಸಂಖ್ಯೆ ಇಲ್ಲದೇ ನೇರವಾಗಿ ವಿಡಿಯೋ ಕರೆ ಅಥವಾ ಕರೆ ಮಾಡಬಹುದು ಎಂದು ಎಲಾನ್ ಮಸ್ಕ ಹೇಳಿದ್ದಾರೆ. ಐಒಎಸ್, ಆ್ಯಂಡ್ರಾಯ್ಡ್, ಮ್ಯಾಕ್ ಹಾಗೂ ಪಿಸಿಗಳಲ್ಲಿ ಕೂಡ ಈ ಸೌಲಭ್ಯ ದೊರೆಯಲಿದೆ. ಮತ್ತು ಈ ಸೌಲಭ್ಯ ಜಾಗತಿಕವಾಗಿ ದೊರೆಯಲಿದೆ. ಇದು ಜಾಗತಿಕ ವಿಳಾಸ ಪುಸ್ತಕವಾಗಲಿದೆ ಎಂದು ಮಸ್ಕ್ ಬಣ್ಣಿಸಿದ್ದಾರೆ.

LEAVE A REPLY

Please enter your comment!
Please enter your name here