
ಪುತ್ತೂರು: ಸರಕಾರಿ ಪ್ರೌಢಶಾಲೆ ಸರ್ವೆ ಕಲ್ಪಣೆ ಇದರ ನೂತನ ಶಾಲಾಭಿವೃದ್ಧಿ ಸಮಿತಿ ಸಭೆ ಹಾಗು ಬೀಳ್ಕೋಡುಗೆ ಕಾರ್ಯಕ್ರಮ ಶಾಲಾ ನೂತನ ಕಾರ್ಯಾಧ್ಯಕ್ಷರಾದ ಸಿದ್ದೀಕ್ ಸುಲ್ತಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಶಾಲಾ ಮುಖ್ಯಗುರು ಜಯರಾಮ ಶೆಟ್ಟಿ ಕೆ ಅವರು ಶಾಲೆಯ ಪ್ರಗತಿಯ ಬಗ್ಗೆ ಮಾತನಾಡಿದರು. ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕ ಉದಯ ಕುಮಾರ್ ಅವರಿಗೆ ಅಧ್ಯಾಪಕ ವೃಂದ, ಶಾಲಾಭಿವೃದ್ಧಿ ಸಮಿತಿ ಹಾಗೂ ವಿದ್ಯಾರ್ಥಿ ವೃಂದದ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ, ಹಾರ ಹಾಕಿ ಸನ್ಮಾನಿಸಲಾಯಿತು.




ಈ ಸಂದರ್ಭದಲ್ಲಿ ಶಾಲಾ ನಿಕಟಪೂರ್ವ ಅಧ್ಯಕ್ಷ ಶಿವನಾಥ ರೈ ಮೇಗಿನಗುತ್ತು, ಕರುಣಾಕರ ಗೌಡ ಎಲಿಯ, ನಿವೃತ್ತ ಅಧ್ಯಾಪಕ ಮಹಾಬಲ ರೈ, ರಾಧಾಕೃಷ್ಣ ರೈ, ಜಯರಾಜ್, ಶಿಕ್ಷಕ ಸಹದೇವ್, ಶಿಕ್ಷಕಿಯರಾದ ಕಾಂಚನಾ, ಹರ್ಷಿತಾ, ಕಮಲ, ವೆಂಕಟೇಶ್ ಮೊದಲಾದವರು ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಅಝೀಝ್ ರೆಂಜಲಾಡಿ, ಹರೀಶ್ ಆಚಾರ್ಯ, ಸರೋಜಿನಿ, ಮಹಮ್ಮದ್ ಕಲ್ಪಣೆ ಹಲವಾರು ಮಂದಿ ಪೋಷಕರು, ಹಳೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಶಿಕ್ಷಕಿ ಉಮೈರಾ ತಬ್ಸಮ್ ಸ್ವಾಗತಿಸಿದರು. ಶಿಕ್ಷಕ ಉಮಾಶಂಕರ್ ವಂದಿಸಿದರು.


