ಪ್ರವೀಣ್ ನೆಟ್ಟಾರ್ ಹತ್ಯೆ ಪ್ರಕರಣ: ಆರೋಪಿ ಝಾಕೀರ್ ಸವಣೂರುಗೆ ಹೈಕೋರ್ಟ್ ಮಧ್ಯಂತರ ಜಾಮೀನು

Prakhara News
1 Min Read

ಬೆಳ್ಳಾರೆ: ಬಿಜೆಪಿ ಯುವಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರ್ ಹಂತಕರ ಪೈಕಿ ಮತ್ತೋರ್ವ ಪ್ರಮುಖ ಆರೋಪಿಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದೆ.

ಝಾಕೀರ್ ಸವಣೂರು (35) ಜಾಮೀನು ಪಡೆದ ಆರೋಪಿ. ಈತ ಪ್ರಕರಣದ 18ನೇ ಆರೋಪಿಯಾಗಿದ್ದ. ಪ್ರವೀಣ್ ನೆಟ್ಟಾರ್ ಹತ್ಯೆ ಸಂಚಿನಲ್ಲಿ ನೇರವಾಗಿ ಭಾಗಿಯಾದವರಲ್ಲಿ ಈತನೂ ಒಬ್ಬನಾಗಿದ್ದ. ಈ ಪ್ರಕರಣದಲ್ಲಿ ಆರಂಭದಲ್ಲೇ ಬಂಧಿಸಲ್ಪಟ್ಟ ಇಬ್ಬರು ಪ್ರಮುಖ ಶಂಕಿತರಲ್ಲಿ ಝಾಕೀರ್ ಸವಣೂರು ಕೂಡ ಒಬ್ಬ. ಈತನನ್ನು 2022 ಜುಲೈ 28 ರಂದು ಬೆಳ್ಳಾರೆಯ ಶಫೀಕ್ ನೊಂದಿಗೆ ಪೊಲೀಸರು ವಶಕ್ಕೆ ಪಡೆದಿದ್ದರು.

ಪ್ರವೀಣ್ ನೆಟ್ಟಾರ್ ಈ ಹಿಂದೆ ಪ್ರಕರಣದ 26ನೇ ಆರೋಪಿಯಾಗಿರುವ ಸೋಮವಾರ ಪೇಟೆಯ ಎಚ್‌.ವೈ. ರಿಯಾಜ್ ಎಂಬಾತನಿಗೆ ಜಾಮೀನು ಲಭಿಸಿತ್ತು. ಈತನನ್ನು ಪ್ರಕರಣದ ಆರೋಪಿಗಳಿಗೆ ಆಶ್ರಯ ಕಲ್ಪಿಸಿದ್ದ ಆರೋಪದಲ್ಲಿ ಬಂಧಿಸಲಾಗಿತ್ತು.

ಏನಿದು ಪ್ರಕರಣ?:
2022 ಜುಲೈ 26 ರಂದು ತಾನು ನಿರ್ವಹಣೆ ಮಾಡುತ್ತಿದ್ದ ಬೆಳ್ಳಾರೆಯ ಮಾಸ್ತಿಕಟ್ಟೆಯ ಅಕ್ಷಯ ಚಿಕನ್ ಸೆಂಟರ್ ಎದುರು ಪ್ರವೀಣ್ ನೆಟ್ಟಾರ್ ಅವರನ್ನು ದುಷ್ಕರ್ಮಿಗಳು ಮಾರಕಾಯುಧದಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣವನ್ನು ಎನ್ ಐಎಗೆ ವಹಿಸಲಾಗಿತ್ತು. 26 ಮಂದಿಯನ್ನು ತನಿಖಾಧಿಕಾರಿಗಳು ಬಂಧಿಸಿದ್ದರು. ಇದೀಗ 18ನೇ ಆರೋಪಿ ಝಾಕೀರ್ ಸವಣೂರುಗೆ ನ್ಯಾಯಾಲಯ ಬೇಲ್ ನೀಡಿದೆ.

Share This Article
Leave a Comment