ಗುರುಪುರ ನದಿಗೆ ಹಾರಿ ಆತ್ಮಹತ್ಯೆ..!! ಯುವತಿಯ ಸಾವಿಗೆ ಪ್ರೇಮ ವೈಫಲ್ಯವೇ ಕಾರಣ

Prakhara News
1 Min Read

ಮಂಗಳೂರಿನ ಗುರುಪುರ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಯುವತಿಯ ಸಾವಿಗೆ ಪ್ರೇಮ ವೈಫಲ್ಯವೇ ಕಾರಣ ಎನ್ನಲಾಗಿದೆ.

ಸೋಮವಾರ ಸ್ನೇಹಿತೆಯೊಂದಿಗೆ  ಗುರುಪುರ ಬಳಿಗೆ ಬಂದಿದ್ದ ಮೂಡಬಿದ್ರೆ ಕಡೆಪಲ್ಲ ನಿವಾಸಿ ನವ್ಯಾ ಸೇತುವೆಯಿಂದ ನದಿಗೆ ಹಾರಿದ್ದಾಳೆ.  ಈ ವೇಳೆ ಸ್ನೇಹಿತೆ ಕೈ ಹಿಡಿದು ಎಳೆದರೂ ಬದುಕಿಸಲು ಸಾಧ್ಯವಾಗಲಿಲ್ಲ.

ವಿಷಯ ತಿಳಿದ ಕೂಡಲೇ ಪೊಲೀಸರು , ಅಗ್ನಿ ಶಾಮಕ ದಳದ ಸಿಬಂದಿ ಆಗಮಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ನವ್ಯಾ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದು ಆತ ಮದುವೆಯಾಗುವುದಾಗಿ ವಂಚಿಸಿದ್ದಾನೆ ಎಂದು ಹೇಳಲಾಗಿದೆ. ಆತನ ಭೇಟಿಗೂ ಮುಂದಾಗಿ ಕರೆ ಮಾಡಿದ್ದಳು, ಬಳಿಕ ಡೆತ್ ನೋಟ್ ಬರೆದಿದ್ದಾಳೆ ಎಂದು ಹೇಳಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

Share This Article
Leave a Comment