ಮಂಗಳೂರು: ಮಂಗಳೂರು – ಬೆಂಗಳೂರು ರೈಲಿನಲ್ಲಿ ಮಹಿಳೆಗೆ ಹೆರಿಗೆ ನೋವು ಕಾಣಿಸಿದ್ದು ವೈದ್ಯರಿಗಾಗಿ 45 ನಿಮಿಷ ಕಾದು ಕೊನೆಗೆ ಪ್ರಯಾಣಿಕರು ಮಹಿಳೆಯನ್ನು ರೈಲಿನಲ್ಲಿ ಸೌಲಭ್ಯವಿಲ್ಲದೆ ಆಸ್ಪತ್ರೆಗೆ ಸಾಗಿಸಿದ ಘಟನೆ ಇಂದು ನಡೆದಿದೆ.


ಮಂಗಳೂರಿನಿಂದ ಮೈಸೂರಿಗೆ ಪ್ರಯಾಣಿಸುತ್ತಿದ ಮಹಿಳೆಗೆ ತೀವ್ರ ರಕ್ತ ಸಾವ್ರ ಉಂಟಾಗಿದ್ದು ಮಾಹಿತಿ ನೀಡಿದರೂ ವೈದ್ಯರಿ ಬಾರದ ಹಿನ್ನೆಲೆ ಪ್ರಯಾಣಿಕರು 45 ನಿಮಿಷಗಳ ವರೆಗೆ ಕಾದು ಅಕ್ರೋಶ ಹೊರಹಾಕಿದ್ದಾರೆ.

ಹೆರಿಗೆಗಾಗಿ ರೈಲಿನಲ್ಲಿ ಪರದೆ ಕಟ್ಟಿ ಬೋಗಿಯಲ್ಲಿದ್ದ ಮಹಿಳೆಯರ ಹರಸಾಹಸ ಪಟ್ಟಿದ್ದು ಕೊನೆಗೆ ಬಂಟ್ವಾಳ ರೈಲ್ವೆ ಸ್ಟೇಷನ್ ನಲ್ಲಿ ಪ್ರಯಾಣಿಕರು ಮಹಿಳೆಯನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದ್ದಾರೆ. ವೈದ್ಯಕೀಯ ಸೌಲಭ್ಯವಿಲ್ಲದೆ ಪರದಾಟ ನಡೆಸಿದ್ದು ತೀವ್ರ ರಕ್ತ ಸಾವ್ರದಿಂದ ಬಳಲುತ್ತಿರುವ ಮಹಿಳೆಯನ್ನು ಸ್ಟ್ರೆಚರ್ ಮೂಲಕ ಆಸ್ಪತ್ರೆಗೆ ಸಾಗಿಸಿದ್ದಾರೆ.

ರೈಲಿನಲ್ಲಿದ್ದ ಮಹಿಳೆಯರ ಸಹಾಯದಿಂದ ಮಗುವಿಗೆ ತಾಯಿ ಜನ್ಮ ನೀಡಿದ್ದು ತಾಯಿ ಹಾಗೂ ಮಗುವನ್ನು ಆಸ್ಪತ್ರೆಗೆ ಸಾಗಿಸಲಾಗಿದ್ದು ಮಗು ಹಾಗೂ ತಾಯಿ ಸುರಕ್ಷಿತರಾಗಿದ್ದಾರೆಂದು ಮಾಹಿತಿ ತಿಳಿದುಬಂದಿದೆ.


