ಅಳಪೆ ದಕ್ಷಿಣ ವಾರ್ಡಿನ ವಿವಿಧ ಕಾಮಗಾರಿ ಯೋಜನೆಗಳಿಗೆ ಶಾಸಕ ವೇದವ್ಯಾಸ್ ಕಾಮತ್ ನೇತೃತ್ವದಲ್ಲಿ ಚಾಲನೆ

Prakhara News
1 Min Read

ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ 50ನೇ ಅಳಪೆ ದಕ್ಷಿಣ ವಾರ್ಡಿನ ಮಂಜಳಿಕೆ, ಅಯೋಧ್ಯನಗರ ರಸ್ತೆ ಅಭಿವೃದ್ಧಿ ಕಾಮಗಾರಿಯು 20ಲಕ್ಷ ರೂ. ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಕಾಮಗಾರಿಯು ಇಲ್ಲಿನ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶೋಭಾ ಪೂಜಾರಿ, ಸ್ಥಳೀಯ ಪ್ರಮುಖರಾದ ವಿಜಯಕುಮಾರ್ ಶೆಟ್ಟಿ ಸಹಿತ ಅನೇಕರ ಪ್ರಮುಖರ ಬಹು ದಿನಗಳ ಬೇಡಿಕೆಯಾಗಿದೆ. ಇಂದು ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಕೊರತೆಯಾಗಿರುವ ಸಂದರ್ಭದಲ್ಲಿ ಲಭ್ಯವಿರುವ ಅನುದಾನಗಳನ್ನೇ ಹೊಂದಿಸಿಕೊಂಡು ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದರು.

ವಾರ್ಡ್ ಅಧ್ಯಕ್ಷರಾದ ಹರೀಶ್, ಬೂತ್ ಅಧ್ಯಕ್ಷರಾದ ಚೇತನ್, ಯಶ್ಪಾಲ್, ಸುಕೇಶ್, ಪ್ರವೀಣ್ ನಿಡ್ಡೇಲ್, ಶೇಖರ್ ಕೊಟ್ಟಾರಿ, , ಚಂದ್ರಶೇಖರ, ಹರೀಶ್ ಅಂಚನ್, ನಾರಾಯಣ, ಗೌಡಯ್ಯ, ಕರಿಷ್ಮ, ರಾಜಣ್ಣ, ಪವಿತ್ರ, ಪುಷ್ಪರಾಜ್, ಅರಿಗ, ನಿವೇದಿತಾ, ಡಾ. ಹರ್ಷ, ಅಪಲ್ಯ, ಡಾ. ರಮ್ಯಾ, ವಾರ್ಡಿನ ಕಾರ್ಯಕರ್ತರು, ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

Share This Article
Leave a Comment