ಮಹಾನಗರ: ಮಂಗಳೂರು ಪಾಲಿಕೆ ವ್ಯಾಪ್ತಿಯ 28ನೇ ಮಣ್ಣಗುಡ್ಡ ವಾರ್ಡಿನ ವನಿತಾವನ ಪಾರ್ಕಿನ ಅಲಂಕಾರಿಕ ವಿದ್ಯುತ್ ದೀಪ, ಜಿಮ್ ಸಲಕರಣೆಗಳು, ಹಾಗೂ ಪಾರ್ಕ್ನ ಅಗತ್ಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಯು ರೂ. 12 ಲಕ್ಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆ ನಡೆಯಿತು.


ನಂತರ ಮಾತನಾಡಿದ ಶಾಸಕರು ಈ ಪಾರ್ಕಿಗೆ ದಿನನಿತ್ಯ ಬರುವ ಸಾರ್ವಜನಿಕರ ಅನುಕೂಲಕ್ಕಾಗಿ ಹಲವು ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಅಭಿವೃದ್ಧಿ ಕಾಮಗಾರಿಯು ಸರ್ವರ ಸಹಕಾರದಿಂದ ನಡೆಯುತ್ತಿದ್ದು ಎಲ್ಲರಿಗೂ ಉಪಯೋಗವಾದರೆ ಅದೇ ಸಂತೋಷ. ಅಭಿವೃದ್ಧಿ ವಿಷಯದಲ್ಲಿ ಯಾವುದೇ ರಾಜಕೀಯಕ್ಕೆ ಆಸ್ಪದವಿಲ್ಲ ಎಂದರು.

ಈ ಸಂದರ್ಭದಲ್ಲಿ ಮೂಡ ಅಧ್ಯಕ್ಷರಾದ ಸದಾಶಿವ ಉಳ್ಳಾಲ್, ನಿಕಟ ಪೂರ್ವ ಪಾಲಿಕೆ ಸದಸ್ಯರಾದ ಸಂಧ್ಯಾ ಮೋಹನ್ ಆಚಾರ್, ಮಾಜಿ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಜಯರಾಮ್ ಶೆಟ್ಟಿ, ವೆಂಕಟೇಶ್ ಆಚಾರ್, ರಘುನಾಥ್ ಪ್ರಭು, ಮೋಹನ್ ಆಚಾರ್, ಮಾಲಾ, ಸೀತಾ, ಯಶ್ ರಾಜ್, ಗಣೇಶ್ ಕಾಮತ್, ಮೂಡ ಅಧಿಕಾರಿಗಳು ಹಾಗೂ ಪ್ರತಿನಿತ್ಯ ವಾಕಿಂಗ್ ಮಾಡುವ ಜನರು ಉಪಸ್ಥಿತರಿದ್ದರು.



