ಕಾರ್ಕಳ: ಕಳೆದ ಮಾರ್ಚ್ ತಿಂಗಳು ಬೆಚ್ಚಿ ಬೀಳಿಸಿದ್ದ ನವ ವಿವಾಹಿತ ಸುದೀಪ್ ರೈ ನೆಲ್ಯಾಡಿ ಎಂಬ ಯುವಕನ ಆತ್ಮಹತ್ಯೆ ಪ್ರಕರಣ ಭಾರೀ ಸಂಚಲನ ಮೂಡಿಸಿತ್ತು.


ಸುದೀಪ್ ರೈ ಆತ್ಮಹತ್ಯೆ ಗೆ ಮುಖ್ಯವಾಗಿ ಆತನನ್ನು ಬಲವಂತವಾಗಿ ಮನೆಯವರಿಗೆ ತಿಳಿಸದೆ ರಿಜಿಸ್ಟರ್ ಮದುವೆಯಾಗಿದ್ದ ಕಾರ್ಕಳ ತಾಲೂಕಿನ ಬಂಗ್ಲೆಗುಡ್ಡೆ ನಿವಾಸಿ ಸೌಮ್ಯ ಶೆಟ್ಟಿ ಯಾನೆ ಅಪ್ಪು ಶೆಟ್ಟಿ ನೀಡಿರುವ ಮಾನಸಿಕ ಕಿರುಕುಳ ಹಾಗೂ ಆತ್ಮಹತ್ಯೆ ಪ್ರಚೋದನೆಯೇ ಕಾರಣ ಎಂದು ಸುದೀಪನ ಪೋಷಕರು ಹಾಗೂ ಗೆಳೆಯರು ಆರೋಪಿಸಿ ಕೇಸು ದಾಖಲಿಸಿದ್ದರು.

ಆಕೆಯನ್ನು ಕಾರ್ಕಳ ಪೊಲೀಸರು ಏಪ್ರಿಲ್ 11 ರಂದು ಉಡುಪಿಯಲ್ಲಿ ಬಂಧಿಸಿದ್ದರು. ನಂತರ ಆಕೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಉಡುಪಿ ಜಿಲ್ಲಾ ನ್ಯಾಯಾಲಯ ಆಕೆಯ ಜಾಮೀನು ಅರ್ಜಿಯನ್ನು ತಿರಸ್ಕಾರ ಮಾಡಿತ್ತು.


ಸೌಮ್ಯ ಶೆಟ್ಟಿಯು ಮಾರ್ಚ್ 17 ರಂದು ಸುದೀಪ್ ತನ್ನ ಫೋನ್ ಕರೆಗಳನ್ನು ಎತ್ತುತ್ತಾ ಇಲ್ಲ ಎಂಬ ಕಾರಣಕ್ಕೆ ಕಾರ್ಕಳದಿಂದ ಆಕೆಯ ಸ್ಕೂಟರಿನಲ್ಲಿ ಸುದೀಪನ ಊರಾದ ನೆಲ್ಯಾಡಿಗೆ ತೆರಳಿ ಆತನ ಮನೆಯ ಬಳಿ ವಿಚಾರಿಸಿ ಅವರು ಅಲ್ಲಿ ಇರದ ಕಾರಣ ನೆಲ್ಯಾಡಿ ಪೇಟೆಯಲ್ಲಿ ಸುದೀಪ್ ಹಾಗೂ ಆತನ ತಾಯಿ ಪುಷ್ಪಲತರವರು ಕಾರಿನಲ್ಲಿ ದೇವರ ಕಾರ್ಯಕ್ಕೆಂದು ತೆರಳುತ್ತಿದ್ದಾಗ ಅವರನ್ನು ಸ್ಕೂಟರಿನಲ್ಲಿ ಅಡ್ಡಗಟ್ಟಿ ರಂಪಾಟ ನಡೆಸಿದ್ದಳು. ಅಲ್ಲದೆ ಸುದೀಪನ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಕೂಡ ಹಾಕಿದ್ದಳು.
ಈ ಬಗ್ಗೆ ಸುದೀಪನ ತಾಯಿ ಪುಷ್ಪಲತರವರು ಉಪ್ಪಿನಂಗಡಿ ಠಾಣೆಯಲ್ಲಿ ಕೇಸು ಕೂಡ ದಾಖಲು ಮಾಡಿದ್ದರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೌಮ್ಯ ಶೆಟ್ಟಿಯ ಸ್ಕೂಟರನ್ನು ಕಾರ್ಕಳ ಪೊಲೀಸರ ಜಂಟಿ ಕಾರ್ಯಚರಣೆಯಲ್ಲಿ ಜೂನ್ 5 ರಂದು ವಶಕ್ಕೆ ಪಡೆದುಕೊಂಡಿದ್ದಾರೆ.


